Friday, September 26, 2025
ಪ್ರಶ್ನೆಗಳು
ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉದ್ದೇಶ ಇಡೇರಲಾರದು.ಶಿಕ್ಷಣವೆಂದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಇಲ್ಲವೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆಯಲ್ಲ ಹಾಗೆ ಕಲಿತ ಶಿಕ್ಷಣದ ವಿಷಯಗಳು ಪರೀಕ್ಷೆಯ ದಿನಗಳವರೆಗೆ ಸಾಗಿ ಬರಬಹುದೇನೋ ಇಲ್ಲವೆ ತದನಂತರ ಅವು ಮರೆಯಾಗಲೂಹುದು. ಅಂದರೆ ಪ್ರಶ್ನಿಸದೆ ಕಲಿಕೆ ಅಪೂರ್ಣ ಎಂದಾಯಿತು. ಹಾಗಾದರೆ ಆ ಪ್ರಶ್ನಿಸುವ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಮೊದಲು ಪ್ರಾರಂಭವಾಗಬೇಕು? ಎನ್ನುವುದರ ಮೇಲೆ ಕಲಿಕೆಯ ತೀವ್ರತೆಯು ವ್ಯತ್ಯಾಸವಾಗುತ್ತ ಸಾಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ತಮ್ಮ ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೇಗನೆ ಹೇಳಿಕೊಡುತ್ತಿರಲಿಲ್ಲ ಬದಲಾಗಿ ವಿದ್ಯೆಯ ಹಸಿವುಂಟಾಗುವಂತೆ ಮಾಡುತ್ತಿದ್ದರು ತದನಂತರದ ದಿನಗಳಲ್ಲಿ ಅನುಭವಗಳನ್ನು ಧಾರೆ ಎರೆಯುತ್ತಿದ್ದರು ಹಾಗೆ ಕಲಿತ ಜ್ಞಾನ ತಮ್ಮ ಜೀವನದ ಕೊನೆಯವರೆಗೂ ಹಿಂಬಾಲಿಸುತ್ತಿತ್ತು ಮತ್ತು ಗಟ್ಟಿಗೊಂಡಿರುತ್ತಿತ್ತು ಅಷ್ಟೆ ಏಕೆ ನಾಲ್ಕೈದು ದಶಕಗಳ ಹಿಂದಿನ ಹಿರಿಯರನ್ನು ನೀವು ಸೂಕ್ಷ್ಮ ವಾಗಿ ಗಮನಿಸಿರಿ ತಾವು ಕಲಿತ ಕವನ, ಕಥನ, ಕಾದಂಬರಿ ಲೆಕ್ಕ ಗಳನ್ನು ನೀರು ಕುಡಿದಷ್ಟೆ ಸಲೀಸಾಗಿ ಹೇಳುವುದನ್ನು ಕೇಳಿದ್ದೇವೆ. ಅದು ಹೇಗೆ ಸಾಧ್ಯ ! ಅವರೆಲ್ಲ ಹಸಿವಾಗಿ ಉಂಡವರು, ಅಂದರೆ ಕೇಳಿ ಪಡೆದವರು.ಹೀಗಾಗಿ ಅವರು ಕಡಿಮೆ ಇಯತ್ತೆಗಳನ್ನು ಕಲಿತಿದ್ದರೂ ಅದನ್ನು ಇಂದು ಪರಿಪೂರ್ಣವಾಗಿ ಹೊರಹಾಕುತ್ತಿದ್ದಾರೆ.ಈಗ ಅವರ ನಿರೀಕ್ಷೆ ಏನೆಂದರೆ ತಾವು ಕಡಿಮೆ ಕಲಿತವರಾದರೂ ಇಂದಿನ ಹೆಚ್ಚಿನ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ ಮತ್ತು ಗುಣಮಟ್ಟ ಕುಸಿದಿದೆ ಎಂದು ಗೊಣಗುಟ್ಟುವುದನ್ನು ಕೇಳಿದ್ದೇವೆ. ಕೆಲವೊಂದು ಅಧ್ಯಾಪಕರು ಹದಿನೈದು ನಿಮಿಷ ಪಾಠ ಮಾಡಿ ಮೂವತ್ತು ನಿಮಿಷ ಬರೆಯಿಸುವುದನ್ನು ರೂಢಿಸಿಕೊಂಡವರಿರಬಹುದೇನೊ ಬಹುಶಃ ಅದು ಹೆಚ್ಚಿನ ಅಂಕಗಳಿಕೆಗೆ ಇರಬಹುದೇನೊ ಅಥವಾ ಪಾಸಿಂಗ್ ಪ್ರತಿಶತ ಹೆಚ್ಚಿಸಲು ಕಂಡುಕೊಂಡರೋ ಅದು ಅವರು ಬೋಧಿಸುವ ಬೋಧನಾ ಪದ್ಧತಿಗೆ ಬಿಟ್ಟ ವಿಷಯ.ಆದರೆ ಇಂದು ನಾವು ಪರಿಪೂರ್ಣ ಕಲಿಕೆಯನ್ನು ಮತ್ತೆ ಮಾಡಲು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾಗಿದೆ. ನಾನು ಈಗ್ಗೆ ಮೂವತ್ತು ವರ್ಷಗಳ ಹಿಂದೆ ಬಿ ಇಡಿ ಮಾಡುವಾಗ ಹರ್ಬರ್ಟನ ಪಂಚ ಸೋಪಾನ ಓದಿದ್ದೆ ಅದರಲ್ಲಿ ಮೊದಲು ಬರುವ ಸೋಪಾನವೇ ಪೀಠಿಕೆ, ಇದರ ಉದ್ದೇಶ, ಉದ್ದೇಶ ಕಥನಕ್ಕೆ ವಿದ್ಯಾರ್ಥಿಗಳನ್ನು ತರುವುದು ನಂತರದ ಕಾಲಘಟ್ಟದಲ್ಲಿ ಅದು ಕಲಿಕಾಪೂರ್ವ ಚಟುವಟಿಕೆಯಾಯಿತು, ಇದರ ಉದ್ದೇಶವೂ ಉದ್ದೇಶ ಕಥನಕ್ಕೆ ಬರುವುದು, ಉದ್ದೇಶ ಕಥನದ ಯಶಸ್ಸು ಮಾತ್ರ ಮಗುವಿನ ಪ್ರಶ್ನಿಸುವ ಸಾಮರ್ಥ್ಯ ವನ್ನೆ ಅವಲಂಬಿಸಿದೆ.ಪ್ರಶ್ನೆಗಳಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನಾನು ಇಲ್ಲಿ ವ್ಯಕ್ತಪಡಿಸಲಾರೆ ಆ ಪ್ರಶ್ನೆಯ ವಿಧಗಳನ್ನು ಕಲಿತವರೆ ಶಿಕ್ಷಕರಾಗಿದ್ದರೆ ಆ ಮಾತು ಬೇರೆ. ಈಗ ನಮ್ಮ ಮುಂದಿರುವ ಬಹುದೊಡ್ಡ ಅವಶ್ಯಕತೆ, ಮಕ್ಕಳಲ್ಲಿ ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡುವುದು. ಒಂದು ಮಾತಿದೆ "ಪ್ರಶ್ನಿಸುವವನು ಕ್ಷಣ ಕಾಲ ದಡ್ಡನಾಗಿರುವನು ಪ್ರಶ್ನಿಸದೆ ಇರುವವನು ಸದಾ ಕಾಲ ದಡ್ಡ ನಾಗಿಯೇ ಉಳಿಯುವನು" ಎಂದು. ಪ್ರಶ್ನಿಸುವ ವಾತಾವರಣ ಎಂದರೆ ಅದೊಂದು ಮನಸ್ಥಿತಿ ಮತ್ತು ಭವಿಷ್ಯ ನಿರ್ಮಾಣದ ಕೇಂದ್ರ ಅಲ್ಲಿರುವವರು ನಾವು ಹೇಳುವುದನ್ನು ಮಾತ್ರ ಕೇಳಲು ಕುಳಿತ ಸೋತೃಗಳಲ್ಲ ಹಾಗಾಗಿಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ನೇಮಿಸಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಮಾತ್ರ ಹೇಳಿ ಕೊಡುತ್ತೇನೆ" ಎಂದು. ಮುಂದುವರಿದು... ಮಕ್ಕಳಲ್ಲಿ ಈಗಾಲೆ ಪ್ರತಿಭೆಯು ಅಂತರ್ಗತ ವಾಗಿದೆ ಅದನ್ನು ಹೊರಗೆ ತರುವವನೆ ಶಿಕ್ಷಕ ಎಂದದ್ದು. ಹಾಗೆಯೇ ಪ್ರಶ್ನಿಸಲು ಬಾರದವನು ಶಿಕ್ಷಕನಾಗಲಾರ. ಪ್ರಶ್ನಿಸುವುದು ಒಂದು ಕಲೆ ಅದಿಲ್ಲದೆ ಉತ್ತಮ ಶಿಕ್ಷಕನಾಗಲಾರ .ಸತತ ಅಭ್ಯಾಸ ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿತ್ವ ವುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ.ಅಂತಹ ಗುರು ವರ್ಗ ಕೋಣೆಯನ್ನು ಸ್ವರ್ಗ ವನ್ನಾಗಿ ಮಾಡಬಲ್ಲ. ಪ್ರಶ್ನೆಗಳಿಲ್ಲದ ಕೋಣೆ ಅದು ಕೊಳೆತ ಬಾಳೆಹಣ್ಣಿನ ಗೊನೆ. " ಪ್ರಶ್ನೆಗಳೆ ಉತ್ತಮ ಶಿಕ್ಷಕನ ಜೀವಾಳ"
Subscribe to:
Posts (Atom)
ಪ್ರಶ್ನೆಗಳು
ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...