Tuesday, May 5, 2020

* ಕರ್ಮ ಯೋಗಿ *

ತುತ್ತಿನ ಚೀಲ ತುಂಬಲು
ನಿತ್ಯ ದುಡಿಯುವವರು ನಾವು
ಸತ್ಯವೇ ನಮ್ಮ ದೇವರು
ಕಾಯಕವೇ ನಮ್ಮ ಧರ್ಮ//ಪ//

ಕೆಸರಾದ ಕೈಗೆ ಮೊಸರು ನೀಡದೇ,
ಹುಸಿ ಭರವಸೆ ನೀಡಿದವರು ನೀವು.
ಹದಮಾಡಿ  ನೆಲವು ಬರಡಾಗದೆ, 
ಹಸಿರಾಗಲು ಉಸಿರಾದವರು ನಾವು//

ನಮ್ಮ ದೆನ್ನುವುದು ಇಲ್ಲಿ ಏನಿಲ್ಲ,
ಕರ್ಮ ಹೆಗಲಿಗೆರಿಸದವರು ನಾವು.
ಪಾಲನೆಯೊಂದರಿತ ಕಾರ್ಮಿಕರು
ಧನಿಯ ಮರ್ಜಿ ನಂಬಿದವರು ನಾವು

ಬೆವರಿನ ಬೆಲೆ ಕೇಳುವವರು ನಾವೆಲ್ಲ,
ಸಂಗ್ರಹಿಸಿ ಮೊಸರು ಮೆಲ್ಲುವ ನೀವು.
ಸಮನಾದ ಬದುಕ ನಮಗೆಕಿಲ್ಲ
ಸತ್ಯ ನಿಯಮ ತಿಳಿಯದವರು ನಾವು

ಕಾರ್ಲಮಾರ್ಕ್ಸ, ಎಂಜಲೊ ಕಹಳೆ,
ಊದಿದ ದ್ವನಿ ಕೇಳದ ಕಿವುಡು ನಾವು.
ಗಣಿ, ಕ್ವಾರಿ, ಗಾರೆಯೇ ಪರೀಕ್ಷೆಯನೆಲೆ
ಉತ್ತರಕ್ಕೆ ಮಾರ್ಕ್ಷ ಬೇಡುವೆವು ನಾವು

                 ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...