Monday, May 25, 2020

* ಮರೆಯದ ಮಹಾಂತರು *


ಮರೆಯದಿರು ಮಹಾಂತರ ಮಾತಿದು
ಮನ ಒಪ್ಪವ ತನು ಒಪ್ಪವ ಮಾತಿದು/
ಶರಣ ಸಂತರ ಸರಳ ಸಂದೇಶವಿದು
ಮಹಾಂತ ಸಂತರ ಜೋಳಿಗೆ ಮಾತಿದು //

ಕಾವಿ ಜೋಳಿಗೆ ಬೇಡಿಕೆ ಮಾತಿದು
ಸತತ ದುಡಿಯದೆ ಸಂಸಾರ ಹಿಂಡಿದ/
ಸಕಲವು ಇದ್ದು ಸನ್ಮಾರ್ಗ ಹಿಡಿಯದ
ವ್ಯಸನಿಗಳಿಗೆ ಶ್ರೀಗಳ ಕಿವಿಮಾತಿದು//

ಸರ್ವಸಂಗ ತ್ಯಾಗಿ, ಸೇವೆಯ ಯೋಗಿ
ಜಾತಿ, ಮತ, ಪಂಥ,ಧರ್ಮ ಮೀರಿದ/
ಶ್ರೇಷ್ಠ ಸಂತರ ಸನ್ಮಾರ್ಗದ ಮಾತಿದು
ಬಸವ ಪಥದ ನಡೆಯ ಮಾರ್ಗವಿದು/

ಮದ ಮತ್ಸರ ಲೋಭ ವರ್ಜಿಸುವ
ದುಷ್ಚಟ ದಾನ ನೀಡುವ ಮಾತಿದು/
ಸಕಲರಿಗೂ ಲೇಸನು ಬಯಸವ
ಬಸವಾನುಯಾಯಿ ಹಿತನುಡಿಯಿದು/

               ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...