Thursday, October 1, 2020

* ಮಾಗಿದ ಜೀವ *

ಮುಖದ ಮೇಲಿನ ನೂರು ಗೆರೆಗಳು

ಹದ ಮಾಡಿದ ಹೊಲದ ಸಾಲುಗಳು 

ಪ್ರಶ್ನೆ ಎಂಬ ಬೀಜ ಬಿತ್ತಬೇಕು ಅಲ್ಲಿ  

ಜ್ಞಾನವೆಂಬ ಅನುಭವದ ಫಲಗಳು //


ಮಾಗಿದ ದೇಹ ಮಹಾದೇವನ ವರ

ಮಾನವ ಹಾಗೆ ಬರುವದಿಲ್ಲ ಬರಪುರ

ಹಗಲು ರಾತ್ರಿ ಹದವಾಗಿ ದುಡಿದ ಫಲ

ಇಲ್ಲಾ ಕಾಯಿದ್ದಾಗ ಉದರುತ್ತೆ ಎಲ್ಲಾ//


ಹಸುಳೆಯಿಂದ ಹಿಡಿದು ಹಲವು ಪಾತ್ರ 

ನಟನೆಯು ನಿಲ್ಲದೆ  ತಲುಪಿದರೆ ಮಾತ್ರ

ನೀನು ಪಡೆಯಬಹುದು ಪ್ರಶಂಸೆ ಪತ್ರ

ನಟನೆ ತಪ್ಪಿದೆ ಬರುವುದು ಬಿಕ್ಷಾಪಾತ್ರ//


ಸಾವಿರ ಸಾವಿರ ಸಾಗರಲೆಗಳ ಮೀರಿ 

ಸವೆಸಿದೆ ಬದುಕಿನ ಸಂಘರ್ಷದ ದಾರಿ 

ಸಂದೇಶ ಒಂದೆ ನಮಗೆ ನೀಡಿದ ಗುರಿ

ಸಾಗು ನೀನು ಕೊಂದು ಅರಿಷಡ್ವೈರಿ//


          ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...