Saturday, November 14, 2020

* ದೀಪಾವಳಿಯ ಪ್ರಭಾವಳಿ *

ಹತ್ತಿಯ ದಾರದ ಬತ್ತಿಯ ತೀಡಿ
ಹೊತ್ತಿ ಉರಿಯಿತು ದೀಪ ನಾಡು
ತಮದ ನೆತ್ತಿಯ ಮೇಲಹತ್ತಿ ಸೀಳಿ 
ಜಗದಲರಳಿತು ದೀಪ ಪ್ರಭಾವಳಿ//

ಪಡುವಣ ಮೂಲಿಯ ಮುಂಗಾರು  
ವರುಣನ ಬೆಡಗು ಮುಗಿಯುವ ಕಾಲ 
ಮೂಡಣ ಮೂಲೆಯ ಆವರ್ತಕಾಲ 
ಮಂಜಿಗೆ ಮಯೂರ ನರ್ತನದಾ ಅಲೆ
ಮನ ಮೈಲಿಗೆ ತೊಳೆದ ಹಬ್ಬದಾ ಕಲೆ//

ಸಗ್ಗದ ಸಿರಿಯಲಿ ಹಿಗ್ಗಿದ ರೈತನ ವನ
ಹಸು ಕರುಗಳು ಬೆಸೆಯಿತು ಈ ದಿನ
ಕಬ್ಬಿಗರುಬ್ಬುವ ಹಿಗ್ಗಿನ ಸುಗ್ಗಿಯ ದಿನ
ಬಗ್ಗರು ನಾಡ ಸ್ವಾಭಿಮಾನಿಗಳನುದಿನ
ಫಸಲು ನುಸುಳಲು ಮನೆ ತನುಮನ//

ಮನೆ ಮನೆ, ಮನ ಮನಗಳಲಿಳಿದು
ಆಗಸಕೇರಿದ ದೀಪದ ಬೆಳಕಿನ ಕಿರಣ 
ಮಾವು ಪತ್ರಿಯ ಹೊಳಪಿನ ತೋರಣ
ಮನೆಯದು ಮಂತ್ರಾಲಯ ಹೂಬಣ
ಪಟಾಕಿ ಸುಡುವುದು ಜಗದ ದುರ್ಗಣ//

           ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...