Wednesday, January 13, 2021

* ಬದುಕು ಬದಲಾವಣೆ *

ಸಗ್ಗದ ಸಿರಿಯ ಹಿಗ್ಗುತ ಸವಿದು
ಸುಗ್ಗಿಯ ಕಾಲದ ಸಂಕ್ರಾಂತಿ ಜೇನು. 
ಜೋಳದ ಹೊಲದಲಿ ಸೀತನಿ ತಿಂದು 
ಭತ್ತವ ತರಿದು ಗತ್ತಿನಲಿ ನಡಿಯೋಣ//

ಹಸುವಿನ ಸಂತತಿ ಕಸುವಿನ ಮೂಲ
ಬೆಸೆಯದ ಬೇಸಾಯ ಯಂತ್ರ ಜಾಲ
ರಾಸುಗಳಿಲ್ಲದ ಕೃಷಿಯನು ತೊರೆದು
ದಾಸರಾಗದೆ ಯಂತ್ರ ಬಳಸೋಣ //

ಮಾಗಿಯ ಚಳಿ ಸಾಗಿತು ನೋಡು
ಮೇಲೆ ಬರುತಿಹ ದಿನಕರನ ದೌಡು
ಮರೆಯದೆ ಎಳ್ಳು ಬೆಲ್ಲವ ಸವಿದು
ಮನದ ಮಲಿನತೆ ತೊಲಗಿಸೋಣ//
 
ಉತ್ತರಕೇರುವ ನೇಸರನ ಕಾಂತಿ
ಇಳಿದವ ಏರಬೇಕು ಬಿಡು ಭ್ರಾಂತಿ
ಹೇಮಂತ ಋತು ಸಂಭ್ರಮವಿದು
ತಮದ ಶಕ್ತಿಯ ತುಳಿಯೋಣ // 

           🖋️ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...