Thursday, January 28, 2021

"ರಾಮನಾಮ ಭಾವನಾಮ"

ಹಿಂದು ಜಲವ  ಮಿಂದ ದೊರೆಯ
ಗಂಗೆ ಯಮುನೆ ಹಿಮದ ಝರಿಯ 
ಗಿರಿಯ ತೊರೆಯ ನಾದ ಲೀಲೆ
ಗಗನ ದಾಟಿ ಹೃದಯ ಮೀಟಿ 
ಬೆಳಗಲೆಮ್ಮ ಭಾವ ಕೋಟಿ ಕೋಟಿ //

ಸೀತೆಯೆಂಬ ಭರತ ಮಾತೆ 
ಪಿತೃ ಪಾಲನೆ ಪತಿಯ ಪಡೆದ ಸುತೆ 
ವನವಾಸ ನಡೆದಳು ಪತಿಯ ಜೊತೆ 
ಅಯೋಧ್ಯೆಗವನೆ ಕೈಕೆಯ ಸುತ
ಪಾದರಾಕ್ಷೆ ಹಿಡಿದ ತನುಜ ಭರತ  //

ಬೆಳಗಲಿ ಭಾವ ಧರ್ಮದ ಜ್ಯೋತಿ 
ಅಳಿಯಲಿ ಅರಿ ಅಧರ್ಮದ ಭೀತಿ
ಅರಳಲಿ ಪಿತೃಪರಿಪಾಲನಾ ನೀತಿ 
ಆದರ್ಶ ಪುರುಷನಿಗೆ ಎತ್ತು ಆರತಿ
ಜಗವೆಲ್ಲ ಬಾಗಿದೆ ನೀನೆಮ್ಮ ಭಾರತಿ//

ಐಕ್ಯ ಸರಸ್ವತಿ ಪುಣ್ಯಧಾಮ
ಜಪಿಸು ಅನುದಿನ ರಾಮನಾಮ
ಜನರ ಹೃದಯ ಬೆಸೆದ ಮಂದಿರ
ಅರಳಿತಲ್ಲಿ ಅಯೋಧ್ಯೆನೆಲದ ಹಂದರ
ಇರುಳು ಕಸಿದ, ಹಿಂದು ಜನರ ಚಂದಿರ//

ಭವ್ಯ ಭಾರತ ಪುತ್ರರು,ಭವದಿ 
ಬೆರೆತು ವಾಸಿಸುವ ಜನರೆ ಮಿತ್ರರು, 
ಕಾಶಿಯಿಂದ ರಾಮೇಶ್ವರ, ಪುರಿಯಿಂದ
ದ್ವಾರಿಕೆ. ಕಣ ಕಣಗಳಲ್ಲಿ ಅರಳಲಿ 
ಹರ ರಾಮ ನಾಮ ದ್ವನಿಗಳು.//

         ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...