Monday, January 4, 2021

* ಆರಕ್ಷಕರು *

ಪೌರರ ರಕ್ಷಣೆಗೆ ಬಂತು ಪ್ರಭುತ್ವ
ಅದರಲ್ಲಿ ಆರಕ್ಷಕರಿಗಿದೆ ಮಹತ್ವ 
ಕೊಲ್ಲುವವರು ನೂರಿರಲು ಕಾಯುವ 
ಕಾಯಕವೆ ಇಂದಿನ ಮಹತ್ವ  //
 
ಹಾಕಿದ್ದು ಖಾಕಿ ಹಾರೈಕೆಯೊಂದೆ ಬಾಕಿ 
ಕಟುವಾದ ಮಾತು ಒರಟು ಸ್ವಭಾವ 
ಕೆಟ್ಟವರೆಂದವರೇನು ಕಡಿಮೆ ?
ಅವರು ಬದುಕಲೂ ಇವರೆ ಬೇಕು !//

ಬಿಗಿ ನಿಯಮದ ಬಹದ್ದೂರರು
ಬಾಗಿ ನಡೆದಾಡುವರೇನು ?
ಹೆಡೆ ಎತ್ತಿ ತಿರುಗಿದರೆ ಕಡುಕಷ್ಟ
ಪುಡಿ ಜನರು ದಾರಿಸಾಗದೆ 
ಆಡಿಕೊಳ್ಳುವರು ಕಡು ಬ್ರಷ್ಟ//

ಬಿಸಿಲು ಮಳೆ ಗಾಳಿಗಿ ಬತ್ತದ
ಉತ್ಸಾಹ , ಸತ್ಯವರಿತವರೆಷ್ಟು ?
ಬೆತ್ತದಿಂದ ಬಾರಿಸುವದೊಂದೆ 
ಇವರಿಗೆ ಕಾಣುವ ಸತ್ಯ ! //

ಬಾರಿಸುವ ಮುನ್ನ ಮನಸ್ಸಿನ 
ತುಮಲ ತಿಳಿದವರೆಷ್ಟು ನಿತ್ಯ.
ಉತ್ಸಾಹದ ಚಿಲುಮೆ ನಮ್ಮೊಲುಮೆ 
ಸಿಕ್ಕರೆ ಬಾಳೆಲ್ಲ ಆಗುವುದು ಸಕ್ಕರೆ //

ಬರಿ ನಿಂದನೆ ಸಾಲದು ಬೇಕು ವಂದನೆ
ಹಿಡಿದು ಪಡೆದವರೇನು ಕಡಿಮೆ 
ನಮ್ಮವರ ಮಕ್ಕಳು ನಮಗೆ ಇಕ್ಕಳವೆ ? 
ಪಡೆ ಪುಷ್ಕಳ ಶಾಂತಿಯ ಮಲ್ಲಿಗೆ .//

     ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...