Tuesday, March 2, 2021

* ಸತ್ಯದ ದಾರವಾಗಬೇಕು *

ಕತ್ತರಿಸಿದ ತುಂಡ ಒತ್ತಿ ಹಿಡಿಯಲು 
ದಾರ ಸುತ್ತಿ ಸುತ್ತಿ ತಾನು ಬರಬೇಕು 
ಗತ್ತಿನಲ್ಲಿ ನಡಯದೆ ಬಾಗಿ ಬಳಕಿ  
ಸೂಜಿಯಲಿ ಮುಳಿಗೇಳಬೇಕು 
ಗೆಳೆಯ  //

ನೊಂದವರ ನೆಲದ ನೆರಳಾಗಿ
ಬೆಂದವರ ಬಾಳಿನ ಬೆಳಕಾಗಿ
ಕೊಂದವರ ನೆಲದ ಕಂಬಳಿಯಾಗಿ
ಬಂಧುವಿನ ಹಂದರಾಗಬೇಕು 
ಗೆಳೆಯ //

ಹಸಿದ ಹೆಬ್ಬುಲಿಯೆದುರು ಹಸುವಾಗಿ 
ಹುಸಿಯನಾಡದೆ ಗೋವು ತಾ ಮರಳಿ  
ಹೊಸ ಬದುಕು ಪಡೆದ ಮಾತೆಯಾಗಿ
ಬೆರಗುಗೊಳ್ಳವಂತೆ ಬದುಕಬೇಕು
ಗೆಳಯ //

ಚಿತ್ತಾರದ ಚಿತ್ತಚಂಚಲೆಯರ ದಂಡು 
ಸುತ್ತಿ ಸುತ್ತಿ ತಿರುಗುತಿದೆ ಇವತ್ತು 
ಗೊತ್ತಿಲ್ಲದೆ ಮತ್ತೇರುತಿದೆ ಬೇಸತ್ತು 
ಸತ್ಯದ ದಾರ ಜೋಡಿಸುಬೇಕು 
ಗೆಳೆಯ //  


        ಬಸನಗೌಡ ಗೌಡರ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...