Saturday, April 15, 2023

* ಮಾಡು ಮತದಾನ *



ಮರೆಯದೆ ಮಾಡು ನೀ ಮತದಾನ 
ಹೊರೆ ಎಂದು ದೂರ ಸರಿದರೆ, ಸಂಹಾರ 
ಸರಿದಾರಿಯಲ್ಲಿರುವವರ ಒರೆಗೆ ಹಚ್ಚುವ ದಿನ
ಜಾರಿದರೆ ನಮಗದು ಐದು ವರುಷದ ಬರ ॥

ಬೆರಗಾಗಬೇಡ, ಬಣ್ಣದ ಮಾತುಗಳಿಗೆ,  
ಕಿರುನಗೆಯ ಬೀರಿ, ಬಾರು ಬೀರು ತೋರಿ
ಬೋರಿ ಭೋಜನ ನೀಡಿ ಕೊಡುವರು ಮಾರಿಗೆ
ಮಾರದಿರು ಅಮೂಲ್ಯವಾದ ನಿನ್ನ ವರ॥

ಉಳಿಸು ಗಣತಂತ್ರ ಬೆಳೆಸು ಪ್ರಜಾತಂತ್ರ 
ದೊರೆಯ ಆಯ್ಕೆಯೇ ಹೊರೆಯಾಗದಿರಲಿ
ಸತ್ಯದ ಸೌಧ ಹೊತ್ತು ನಡೆಯಲು, ನೀ 
ಒತ್ತು ನೀತಿವಂತರಿಗೆ ಅಮೂಲ್ಯ ಮತ॥

ಮತದಾನ, ಬಲಿದಾನಗೈದವರ ಭಿಕ್ಷೆ
ಮರೆತು ಸಾಗಿದರೆ ಆಗುವುದು ಶಿಕ್ಷೆ
ಗತವೂಮ್ಮೆ ಮೆಲಕು ಹಾಕು,ನಿನಗೆ ಶ್ರೀರಕ್ಷೆ
ಜೊತೆಯಾಗಿ ನಡೆದರೆ ಜಗವೆಲ್ಲ ಸುಭಿಕ್ಷೆ॥

ಇದು ನನ್ನ ಅಭಿಮತ ಬೇಡ ಭಿನ್ನಮತ
ಸಾಲು ನಿಲ್ಲಲು ಸೋಲದಿರು ಗೆಳೆಯ 
ಗೆಲವು ಕಾಣಲು ನಿಲ್ಲು ನೀ ತೀರ್ಪುಗಾರ
ಬಲ ತುಂಬು ಅದು ನ್ಯಾಯ ಮಂದಿರ॥














 
 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...