Monday, October 28, 2019

ಭಾವ ಭಾಷೆ ಬಂಧನ


ಭಾಷೆ ಒಂದು ಭಾವ ನೂರು
ಏಕೆ ಬಂಧನ
ಬಾಲ್ಯ ಕಿತ್ತು ಭಾರ ಹೆರಿ
ಏಕೆ  ನಿಂದನ
ಹಲವು ಭಾಷೆ ಕೆಲವು ವೇಷ
ಉದರ ಪೋಷಣ

ತೆಲುಗು ತಮಿಳು ಬಂಗಾಳಿ ಹಿಂದಿ
ಕನ್ನಡಕಲ್ಲ  ಬಂಧನ
ಆಗಸವೊಂದೆ ತಾರೆ ನೂರು
ಬೆಳಕು ಒಂದೆ ಕಂದನ
ಭೇಧ ಭಾವ ನಾವು ನೀವು
ಕೊಳಕು ಬೇಡ ವಂದನ

ಹಲವು ಭಾಷೆ  ಅಲ್ಲ ವಿಷ
ಭಾವ ಬೆಸುಗೆ  ಬಂಧನ
ತಾಯಿ ನುಡಿ  ಬಾಳಿಗೆ ಮುನ್ನುಡಿ
ಭಿನ್ನ ನುಡಿ  ಅನ್ನದ ನುಡಿ
ಜೊತೆಯಾಗಿ ನಡೆಸು  ಕಂದನ
















No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...