Thursday, January 30, 2020

ವೈವಿದ್ಯತೆಯಲ್ಲಿ ಎಕತೆ


1)ಭೌಗೋಳಿಕ ವೈವಿದ್ಯತೆ
ತಂಪಾದ ಸಿಯಾಚಿನ ಮತ್ತು ಅತಿ ಉಷ್ಣ ಪ್ರದೇಶ ರಾಜಸ್ಥಾನದಂತಹ ಮರುಭೂಮಿ ಗಳು ಭಾರತದಲ್ಲಿ ಇವೆ.ನಿತ್ಯ ಹರಿದ್ವರ್ಣ ಕಾಡುಗಳು ಗಿರಿದಾಮಗಳು ಇಲ್ಲಿವೆ  
2) ಸಾಾಹಿತ್ಯ ಹಾಗೂ ಭಾಷಾ ವೈವಿಧ್ಯತೆ.;
ಭಾರತದಲ್ಲಿ ನಿಗ್ರೋ, ದ್ರಾವಿಡ,ಅಲ್ಫಾಯಿನ್ ಮುಂತಾದ ಕುಲಗಳಿವೆ ಮತ್ತು 1600 ಕ್ಕೂ ಹೆಚ್ಚು  ಭಾಷೆಗಳಿವೆ.
3)ಸಾಮಾಜಿಕ ಮತ್ತು ಧಾರ್ಮಿಕ  ವೈವಿಧ್ಯತೆ ;
ಭಾರತವು ಧರ್ಮಗಳ,ಜಾತಿಗಳ,ಪಂಥಗಳ,ಸಾಮಾಜಿಕ ವ್ಯವಸ್ಥೆಗಳ ವಸ್ತು ಸಂಗ್ರಹಾಲಯ.ಉಡುಗೆ ತೊಡುಗೆ ಆಹಾರ ಪದ್ಧತಿಗಳಲ್ಲಿ ಭಿನ್ನತೆ ಇದೆ,ಪಿತೃಪ್ರದಾನ ಹಾಗೂ ಮಾತೃ ಪ್ರಧಾನ ಕುಟುಂಬಗಳು ಇಲ್ಲಿವೆ..
4) ಆರ್ಥಿಕ ವೈವಿದ್ಯತೆ.
ಭಾರತದಲ್ಲಿ ಆರ್ಥಿಕ ಅಸಮಾನತೆ ಇದೆಒಂದೆಡೆ ತುಂಬಾ ಶ್ರೀಮಂತರಿದ್ದರೆ ಇನ್ನೊಂದೆಡೆ ತೀರಾ ಬಡವರು ಇದ್ದರೆ
ಎಲ್ಲಾ ವೈವಿಧ್ಯತೆಗಳ  ಹೊರತಾಗಿಯೂ ನಮ್ಮಲ್ಲಿರುವ ಅನೇಕ ಏಕೀಕರಿಸುವ ಶಕ್ತಿಗಳುಭಾರತದಲ್ಲಿವೆ.
1) ಭೌಗೋಳಿಕ ಏಕತೆ:    
ಉತ್ತರದ ಹಿಮಾಲಯ ಮತ್ತು ದಕ್ಷೀಣದ ಸಾಗರಗಳು  ಭಾರತವನ್ನು ಇತರೆ ದೇಶಗಳಿಂದ ಪ್ರತ್ಯೇಕಿಸಿವೆ ಮತ್ತು ಒಂದು ಪ್ರತ್ಯೇಕ ಭೌಗೋಳಿಕ ಭಾಗವಾಗಿಸಿವೆ.
2) ಆಡಳಿತಾತ್ಮಕ ಕತೆ:
ಭಾರತದ ಪ್ರಾಚೀನ ಆಡಳಿತ ವ್ಯವಸ್ಥೆ ಗಳು ಬಹುತೇಕ ಸಮಾನ ಮತ್ತು ಏಕರೂಪವಾಗಿದ್ದವು ಮತ್ತು ಇವು ಚಾಣಕ್ಯನ ಅರ್ಥ ವ್ಯವಸ್ಥೆ ಯಿಂದ ಹೊರ ಹೊಮ್ಮಿವೆ.ಮತ್ತು ಅನೇಕ ಅರಸರು ಭಾರತವನ್ನು ಏಕ ಆಡಳಿತಕ್ಕೆ ತರುವ ಪ್ರಯತ್ನ ಮಾಡಿದ್ದಾರೆ
3) ಏಕ ರೂಪದ ಶಿಕ್ಷಣ ಮತ್ತು ಸಾಹಿತ್ಯ :
ಸಂಸ್ಕೃತ  ಭಾಷೆ ಮತ್ತು ವೈದಿಕ ಸಾಹಿತ್ಯರಾಮಾಯಣ,ಮಹಾಭಾರತ  ಮತ್ತು ಭಗವದ್ಗೀತೆ ಗಳು ಭಾರತೀಯರಲ್ಲಿ ಏಕತೆ ಭಾವವನ್ನು ತುಂಬಿವೆ.
4) ಧಾರ್ಮಿಕ  ಮತ್ತು ಸಾಮಾಜಿಕ ಅಚರಣೆ ಗಳು:
ಭಾರತವು ಅನೇಕ ಧರ್ಮ, ಜಾತೀಯ  ಮತ್ತು ಪಂಥಗಳ ಜನರನ್ನು ಹೊಂದಿದ್ದರು ಜನರು ಸೌಹಾರ್ದಯುತ ಜೀವನ ನೆಡೆ ಸುತ್ತಿದ್ದಾರೆ 
5) ಇತ್ತೀಚಿನ ಬದಲಾವಣೆಗಳು.ಸಂವಿಧಾನ ಮತ್ತು ಸರ್ಕಾರದ ನೀತಿ.ಇಂದಿನ ಸಾಮಾಜಿಕ ಪರಿಸ್ಥಿತಿ,ಜಾಗತಿಕ ಪರಿಣಾಮಗಳು ಮುಂತಾದವು ಧರ್ಮ ಹಾಗೂ ಜಾತಿಗಳ ವ್ಯತ್ಯಾಸ ಕಡಿಮೆ ಮಾಡಿವೆ.


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...