ಸ್ಪರ್ಧೆಗೆ ನೀಡಿದ ಶಬ್ದ "ಸಹನೆ"
1) ಕ್ಷಾತ್ರ ಭಾವ.
ಗುರುವಾಗಲು ಬೇಕು ಮಕ್ಕಳಾಡುವ
ಗಲಾಟಿ ಸಹಿಸುವಾ ಸಹನಾ ಭಾವ
ಸೈನಿಕನಿಗಿರಬೇಕು ಕ್ಷಾತ್ರಭಾವ
ಶತೃಗಳಿಗೆ ತೋರಿಸಿದರೆ ಶ್ಮಶಾನದ ಶವ
2) ಹೆಣ್ಣು
ಹೆಣ್ಣೆ0ದರೆ ಮನೆಯ ಕಣ್ಣು
ಸಂಸಾರಕ್ಕೆ ಹೊರ್ತಾರೆ ಮಣ್ಣು
ಪ್ರೀತಿ ಕೊಡತಾರೆ ಹಣ್ಣು ಹಣ್ಣು
ಸಹನೆಗೆಟ್ಟರೆ ತವರು ಕಡೆ ಇವರ ಕಣ್ಣು
3) ಮಾಲಂಗಿ
ಮಾತುಗಾತಿ ಮರಳ ಮಾಡಿ
ಹೇಳಿದಳು ನೀ ನನ್ನ ಹೃದಯದ ಕುಡಿ
ಹೂವಾಗಿ ಸಾಕು ಸಹಿಸು ಕಾಪಾಡಿ
ಮದುವೆಯಾದ ಮೇಲೆ ಬರಿ ಕಿಡಿ ಕಿಡಿ.
4) ಲಾಕಡೌನ
ಲಾಕಡೌನ ಅಂದರ ನಾ ತಿಳಿದಿದ್ದೆ
ಅಂಗಡಿ ಮುಂಗಟ್ತು ಯಾತ್ರೆ ಮಾತ್ರ
ಆದರ ಈಗ ತಿಳಿತು ನನ್ನಾಕಿ ಸಹನೆ
ತಪ್ಪಿದರ ಮನೆತುಂಬಾ ಕೌಂಟಡೌನ.
5) ಸರಸ
ಸರಸ ಸಲ್ಲಾಪದಲಿ ನನ್ನಾಕಿ
ಸಹನಾ ಮೂರ್ತಿ, ಸಾಗ ಹಾಕಿ
ಆಮೇಲೆ ಮತ್ತೆ ಮತ್ತೆ ಕೇಳತಾಳ
ಆಫಿಸಿಂದ ಯಾವಾಗ ಬರತಿ.
6) ಸಂತೃಪ್ತಿ
ಬಡತನವೆಂಬುದು ದೇವರ ವರ
ಸಾಗ ಹಾಕಬೇಕು ಸಹನೆಯಿಂದ
ಸಾಗರದಾಚೆ ದೂರ ದೂರ
ಸಂತೃಪ್ತಿ ಸಿಗುತ್ತೆ ಸಾವಿರ ಸಾವಿರ.
7) ಕಲಿಕೆ
ಸಂಬಳದ ದಿನ ಕಲಿಯಬೇಕು
ನನ್ನಾಕಿಯಿಂದ ಸಹನೆ ಎಂದರೇನು ?
ರೌದ್ರಾವತಾರ ಎಂದರೇನು ?
ಕಲಿಯಬೇಕು ಸಂಬಳದ ಕೊನೆ ದಿನ.
8) ಮನೆ
ಮೌನವಾಗಿರುವ ಮನೆಯಲ್ಲಿ
ಸಹನೆಯೆ ಯಜಮಾನ
ಮಾತು ಮಾತುಗೆ ವಾದ ಮಾಡುವ
ಮನೆಯಲ್ಲಿ ನಿತ್ಯ ಕದನ.
9) ಶಾಂತಿ
ಸಿರಿವಂತ ಹಣದ ರಾಯಭಾರಿ,
ಆದರೆ ಸಹನೆ ದುಬಾರಿ
ಬರಿ ವರಿ,ವರಿ,ಬಡವ ಗುಣದ
ರಾಯಭಾರಿ ಶಾಂತಿಯ ರುವಾರಿ.
10) ಅದೇಶ
ನೀನಿಟ್ಟ ಆದೇಶ ಪಾಲಿಸಬೇಕು
ಯಾಕೆಂದರೆ ಮಕ್ಕಳು ನಾಲ್ಕು
ಅದಕಿಲ್ಲ ನನಗೆ ದಿಮಾಕು
ಇಷ್ಟೆ ಸಹನೆಗೆ ಸಾಕ್ಷಿ ಸಾಕು.
ಬಸನಗೌಡ ಗೌಡರ
1) ಕ್ಷಾತ್ರ ಭಾವ.
ಗುರುವಾಗಲು ಬೇಕು ಮಕ್ಕಳಾಡುವ
ಗಲಾಟಿ ಸಹಿಸುವಾ ಸಹನಾ ಭಾವ
ಸೈನಿಕನಿಗಿರಬೇಕು ಕ್ಷಾತ್ರಭಾವ
ಶತೃಗಳಿಗೆ ತೋರಿಸಿದರೆ ಶ್ಮಶಾನದ ಶವ
2) ಹೆಣ್ಣು
ಹೆಣ್ಣೆ0ದರೆ ಮನೆಯ ಕಣ್ಣು
ಸಂಸಾರಕ್ಕೆ ಹೊರ್ತಾರೆ ಮಣ್ಣು
ಪ್ರೀತಿ ಕೊಡತಾರೆ ಹಣ್ಣು ಹಣ್ಣು
ಸಹನೆಗೆಟ್ಟರೆ ತವರು ಕಡೆ ಇವರ ಕಣ್ಣು
3) ಮಾಲಂಗಿ
ಮಾತುಗಾತಿ ಮರಳ ಮಾಡಿ
ಹೇಳಿದಳು ನೀ ನನ್ನ ಹೃದಯದ ಕುಡಿ
ಹೂವಾಗಿ ಸಾಕು ಸಹಿಸು ಕಾಪಾಡಿ
ಮದುವೆಯಾದ ಮೇಲೆ ಬರಿ ಕಿಡಿ ಕಿಡಿ.
4) ಲಾಕಡೌನ
ಲಾಕಡೌನ ಅಂದರ ನಾ ತಿಳಿದಿದ್ದೆ
ಅಂಗಡಿ ಮುಂಗಟ್ತು ಯಾತ್ರೆ ಮಾತ್ರ
ಆದರ ಈಗ ತಿಳಿತು ನನ್ನಾಕಿ ಸಹನೆ
ತಪ್ಪಿದರ ಮನೆತುಂಬಾ ಕೌಂಟಡೌನ.
5) ಸರಸ
ಸರಸ ಸಲ್ಲಾಪದಲಿ ನನ್ನಾಕಿ
ಸಹನಾ ಮೂರ್ತಿ, ಸಾಗ ಹಾಕಿ
ಆಮೇಲೆ ಮತ್ತೆ ಮತ್ತೆ ಕೇಳತಾಳ
ಆಫಿಸಿಂದ ಯಾವಾಗ ಬರತಿ.
6) ಸಂತೃಪ್ತಿ
ಬಡತನವೆಂಬುದು ದೇವರ ವರ
ಸಾಗ ಹಾಕಬೇಕು ಸಹನೆಯಿಂದ
ಸಾಗರದಾಚೆ ದೂರ ದೂರ
ಸಂತೃಪ್ತಿ ಸಿಗುತ್ತೆ ಸಾವಿರ ಸಾವಿರ.
7) ಕಲಿಕೆ
ಸಂಬಳದ ದಿನ ಕಲಿಯಬೇಕು
ನನ್ನಾಕಿಯಿಂದ ಸಹನೆ ಎಂದರೇನು ?
ರೌದ್ರಾವತಾರ ಎಂದರೇನು ?
ಕಲಿಯಬೇಕು ಸಂಬಳದ ಕೊನೆ ದಿನ.
8) ಮನೆ
ಮೌನವಾಗಿರುವ ಮನೆಯಲ್ಲಿ
ಸಹನೆಯೆ ಯಜಮಾನ
ಮಾತು ಮಾತುಗೆ ವಾದ ಮಾಡುವ
ಮನೆಯಲ್ಲಿ ನಿತ್ಯ ಕದನ.
9) ಶಾಂತಿ
ಸಿರಿವಂತ ಹಣದ ರಾಯಭಾರಿ,
ಆದರೆ ಸಹನೆ ದುಬಾರಿ
ಬರಿ ವರಿ,ವರಿ,ಬಡವ ಗುಣದ
ರಾಯಭಾರಿ ಶಾಂತಿಯ ರುವಾರಿ.
10) ಅದೇಶ
ನೀನಿಟ್ಟ ಆದೇಶ ಪಾಲಿಸಬೇಕು
ಯಾಕೆಂದರೆ ಮಕ್ಕಳು ನಾಲ್ಕು
ಅದಕಿಲ್ಲ ನನಗೆ ದಿಮಾಕು
ಇಷ್ಟೆ ಸಹನೆಗೆ ಸಾಕ್ಷಿ ಸಾಕು.
ಬಸನಗೌಡ ಗೌಡರ
No comments:
Post a Comment