Tuesday, April 14, 2020

ಡಾ// ಬಿ ಅರ್ ಅಂಬೇಡ್ಕರರಿಗೆ ಸಮರ್ಪಣೆ

ಡಾ// ಅಂಬೇಡ್ಕರರಿಗೆ ಅರ್ಪಣೆ

ಹನುಮ, ಭೀಮನುದಿಯಿಸಿ
ಶ್ರೀರಾಮ, ಧರ್ಮರಿಗೆ ಬಿಡಿಸಿದರು
ಗ್ರಹಣ ಅಂದು,
ಜಾತೀಯ ಭೀತಿಯಲಿ ಬಸವಳಿದ 
ಭಾರತಕೆ ನೀ ಬಂದೆ ಬಡವ,
ದಮನಿತರ ತಂದೆ,//

ಉಂಡುಟ್ತು ಮಲಗಿದವರ
ಮೊಂಡು ವಾದವ ಮೀರಿ
ಬೆಂಡೆತ್ತಿದೆ  ಅಂದು,
ಸಮಾನತೆಯ ಬೀಜ ಬಿತ್ತಿದೆ
ನಿನ್ನರಿತ ಹದವಾದ ಮನದ
ಅಂಗಳದಲ್ಲಿ ಇಂದು //

ನೀ ನಮ್ಮೆಲ್ಲರ ದೈವ ಬಾಬಾ
ನೀ ನಮ್ಮೆಲ್ಲರ ಬದುಕಿನ
ಗ್ರಹಣ ಬಿಡಿಸಿದೆ ಇಂದು
ಪಶ್ಚಿಮ ಪೂರ್ವದ ಕಾನೂನುಂಡು
ಪೂರ್ವಾಗ್ರಹ ಪಂಡಿತರ
ಎದುರುಗೊಂಡೆ ತಂದೆ //

ಜಗತ್ತೇ ಬೆರಗಾಗುವ ಕಾನೂನ
ಕಟ್ಟಿ ,ಕೋಟಿ ಕೋಟಿ ಜನ
ದಾಟದಂತೆ ಮೇಟಿಯಾದೆ ಇಂದು
ಕಟ್ಟಿಗೆ ,ಕಲ್ಲು ಮನೆ ಕಟ್ಟುವವ
ಇಟ್ಟಿಗೆಯಿಂದ ಮನೆ ಕಟ್ಟಿದಂತೆ
ದೇಶ ಕಟ್ಟಬಹುದೆಂದೆ ತಂದೆ //

                  ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...