Monday, April 13, 2020

ಹನಿಗವನ

ಚೀಲ

ಚಲುವಿಗೆ ಚಿತ್ತಾರ ಬೇಕೆ
ಒಲುವೆ ಅದಕೆ ಮೂಲ
ಹಾಗಾಗಿ ನನ್ನಾಕಿ
ದಿನಾಲೂ ಕೈಯಾಗ ಇಡತಾಳ
ದಿನಸಿ ಕಾಯಿಪಲ್ಲೆ ಚೀಲ

            🖋️ಬಸನಗೌಡ ಗೌಡರ

ಪಾಠ

ಶಿಕ್ಷಕ ರಕ್ಷಿತನಿಗೆ ನಡೆದಿತ್ತು ಪಾಠ
ನಗೆ ಪ್ರಕಾರಗಳು ಎಷ್ಟು ?
ಹುಡುಗ ಹೇಳಿದ, ಇರಬಹುದು
ಒಂದು ಏಳೆಂಟು
ಶಿಕ್ಷಕ ಕೇಳಿದರು, ನಸುನಗು ಎಂದರೇನು ?
ನಸುಕಿನಲ್ಲಿ ನಗುವುದೆ ನಸುನಗು..  ಹೇಳಿದ ಹುಡುಗ .
ಶಿಕ್ಷಕ ಸುಸ್ತೊ ಸುಸ್ತು
 
         🖋️ ಬಸನಗೌಡ ಗೌಡರ

ಅತ್ತೆಭಯ

ಮಲ್ಲಿಗೆಯ ಮೊಗದವಳು
ಹಲ್ಲು ಗಿಂಜುವಳು ಒಮ್ಮೊಮ್ಮೆ
ಮುತ್ತು ಪೋಣಿಸಿದಂತೆ,
ನತ್ತು ತಿರುಗಿಸುವಳು ಇನ್ನೊಮ್ಮೆ
ಮುಂಗುರುಳು ಹೆಡೆಯೆತ್ತಿದಾಗ
ನಾ ನೋಡಲು ಹೆದರಿದೆ ಕಣ್ಣೆತ್ತಿ
ಯಾಕೆಂದರೆ ದುರುಗುಟ್ಟಿತ್ತು
ಮುಂದಾಗುವ ಅತ್ತೆ.....  ನಾ ಕಾಲ್ಕಿತ್ತೆ .

            ಬಸನಗೌಡ ಗೌಡರ


 * ಸಾಲಿನ ಮಹಿಮೆ *

ನಿದ್ದೆಯಲೆದ್ದ ಬುದ್ದ ನಾದ
ಬುದ್ದನ ಕಥೆ ಓದಿಯೂ
ಸಂಸಾರದಲ್ಲಿ ಬಿದ್ದು
ಒದ್ದಾಡುತ್ತಿರುವೆನು ನಾ ಪೆದ್ದ/
ಕಲಾಮ ಸಾಹೇಬರಿಗೆ  ಸಲಾಮ
ಹಾಕಿಯೂ ಕೆಲಸ ಕುಲಗೆಡಿಸಿ
ನಾ ಗರೀಬನಾಗಿದ್ದೆ /
ಏಕೆಂದರೆ ನಾನಿರುವದು
ಕಥೆ ಕೇಳಿಯೂ ವ್ಯತೆ ಪಡುವವರ ಸಾಲಿನಲ್ಲಿ ನಾನೊಬ್ಬನಾಗಿದ್ದೆ //

            ಬಸನಗೌಡ ಗೌಡರ

ಹನಿಗವನ ಸ್ಪರ್ಧೆಗಾಗಿ

ಕ್ರಮ ಸಂ : 13

* ಕರ್ತವ್ಯ *

ಪ್ರಿಯೆ ಎದೆಯ ಬಾರದ ಮೋಡಕೆ
ಮುತ್ತುಗಳ ಮಳೆ ಸುರಿವ ಬಯಕೆ
ಹುಲುಸಾಗಿ ಬೆಳೆವೆ ಹೊಂಬಾಳೆ ಅಡಿಕೆ

ಕರ್ತಾರನ ಕಮ್ಮಟ ಕರ್ತವ್ಯ ಮರೆಯೆ
ಹೆತ್ತು ತುತ್ತ ನೀಡಿದ ಕರಗಳಿಗೆ ತರುವೆ
ಹೊತ್ತು ಸಾಗರದಿ ಮುತ್ತಿಗೇನು ಬರವೆ.

 * ಅಂದ ಚಂದ *

ವಿರಹ ವೇದನೆಯಲ್ಲಿ ಪ್ರಿಯಕರನ
ಕನಸು ಕಾಣುವುದೆ ಚಂದ
ವರನ  ಮುಂದೆ ಮಾಡುವ ವಧುವಿನ
ವನಪು ವಯ್ಯಾರವೆ  ಅಂದ
ವಧುವರರು ಸಮರಸದಿ ಕೂಡಿ
ಬಾಳಿದಾಗ ಆಗುವುದು ಕಂದ

        🖋️    ಬಸನಗೌಡ ಗೌಡರ

* ಕರ್ಮ *

ನಾವು ಮಾಡಿದ ಪಾಪ ಪುಣ್ಯಗಳು
ನಮ್ಮ ನೆರಳಿನಂತೆ ಹಿಂದೆ ಮುಂದೆ.
ತಿರುಗುವು ಚಪ್ಪಡಿಗೆ ಬಡಿದು ಬರುವ
ಪ್ರತಿದ್ವನಿಯಂತೆ ಬೆನ್ನ ಹಿಂದೆ. 
ಕಾರ್ಯ ಮಾಡುವಾಗ ಕ್ರಮವಿರಲಿ
ಧರ್ಮದೂಳಗೂ ಕರ್ಮವಿರಲಿ.

               ಬಸನಗೌಡ ಗೌಡರ 
* ಕಂಪನ *

ಕಗ್ಗತ್ತಲು ಕವಿಯಲಿ 
ಕಾರ್ಮೋಡ ಮುಸುಕಲಿ 
ಕಡಲ ಒಡಲಾಳದಲ್ಲಿರಲಿ
ಕೈ ತುತ್ತು ತಿನಿಸಿದ ಕರುಳೆ ಕಣ್ಣಾಗಿ
ತನ್ನ ಕಂದನ ಗುರುತು ಕಂಪಣವಾಗಿ
ಅಂತಕರಣ ಹುಡುಕುವುದು ಹಸಿವಾಗಿ

                    ಬಸನಗೌಡ ಗೌಡರ 

* ಹರಾಮ ಶಾಮ *

ನಾಮ, ನೇಮ್ ಬೇಕಂದ್ರ ಮಾಡ ಹೋಮ
ಅಡ್ಡ ಇರಲಿ,ಉದ್ದ ಇರಿಲಿ ದೇಹಕ್ಕಿರಲಿ  
ಅದು ನಿನ್ನ ದೇಹದಲ್ಲೆ ಇರಲೊ ಶಾಮ!
ಹಾಕಬೇಡ ಇನ್ನೊಬ್ಬರಿಗೆ ಪಂಗನಾಮ
ನೇಮ್ ಬೇಕೆಂದ್ರ ತಿನಬ್ಯಾಡ ಹರಾಮ
ತಿಂದರ ಬೆಂಡೆತ್ತತಾರ ಪೋಲಿ ಮಾಮಾ

*
* ನಾಕ ನರಕ *

ಉಕ್ಕಿ ಹರಿದರೆ ಸದಾಕಾಲ ನಗೆ ಬುಗ್ಗೆ 
ನೆರೆಹೊರೆ ಮೊಗವರಳತೈತಿ ಮೊಗ್ಗು !
ಸೊಕ್ಕು ಬೆಳೆದರೆ ಮುದಡತೈತ ನಾಕ  
ಸಾಗ  ಹಾಕತಾರು ತಿಳಿ ಬದುಕು ನರಕ!
ಕಟ್ಟಿಕೊಂಡವರು ಬಿಟ್ಟು ಹೊದಾರು
ಸುಟ್ಟು ಬಿಡು ಅರಿಷಡ್ವರ್ಗ ಬೇರು.


                       ಬಸನಗೌಡ ಗೌಡರ 
* ನವರಂಗಿ *

ಕೆಂದುಟಿಯ ಮೇಲೊಂದು 
ಕವನ ಬರೆಯಲೆ ಅರ್ಧಾಂಗಿ,
ಕೇಳಿದೆ ನಾ ವಿನಮ್ರವಾಗಿ !
ಹನಿ ಹನಿ ಬಳಗಕ್ಕೆ ಬರೆದು ಹಾಕು 
ಊದಬೇಡ ಪುಂಗಿ  
ನತ್ತಿಗೊಂದು ಮುತ್ತು ಕಾಣದು    
ಸಾಕು ಕವಿತನದ ನವರಂಗಿ.
ಕಾಲಹರಣ ಸಾಕೆಂದು
ಜಾಡಿಸಿದಾಗ ನಾನು ಏಕಾಂಗಿ !

        🖋️.ಬಸನಗೌಡ ಗೌಡರ








No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...