Thursday, April 16, 2020

ಜೀವಜಲ


ಕೆರೆ ಕಾಲುವೆ ಕಲ್ಯಾಣಿ, ಮನುಜ
ಕುಲದ ಜಿವಾಮೃತ ಗಣಿ
ಮನುಜನ ದುರಾಸೆಗಾತು ಬಲಿ
ಮರೆತರೆ ಬಸ್ಮಾಸುರನಂತೆ ಬಲಿ //

ನೀರು ತರಲು ಮಾರು ದೂರ
ಬೊರವೆಲ್ ಆದವು  ಮಾನವಾಧಾರ
ನಾವು ನೆಚ್ಚಿದೆವು ಗಲ್ಲಿ  ಶುದ್ದನೀರು
ಪೈಸೆ ಹಾಕಿ ಚೌಕಾಸಿ ಕುಡಿದೆವು ನೀರು/

ರೈತನ ಹಾಲಿಗೆ ಹತ್ತು, ಇಪ್ಪತ್ತು
ಕೊಡದೆ ಕಾಡಿಸುವರು ಒಪ್ಪತ್ತು
ಸೋಷಿದ ನೀರಿಗೆ ತಕರಾರಿಲ್ಲದಿಪ್ಪತ್ತು
ಅರಿಯದೆ ಕಾಲ ದೂಡಿದರಾಪತ್ತು //

ಸತ್ಯ ಅರಿಯಬೇಕು ನಿತ್ಯಸತ್ಪ್ರಜೆ
ಸಾವಿರ ವರುಷದ ಇತಿಹಾಸ ಗಣಿ
ಮೌರ್ಯ ರಿಂದ ಹರ್ಷನವರಗೆ
ಮಯೂರನಿಂದ ಮೈಸೂರುವರೆಗೆ //

ಜಲವೆ ಪ್ರಾಣಿ,ಪಕ್ಷಿಗಳಿಗಾಧಾರ
ಹುಲು ಮಾನವನುದರಕೂ ಆಧಾರ
ಜಲ ಸಂರಕ್ಷಣೆ  ಶ್ರೇಷ್ಟ ಪರಂಪರೆ
ನಿರ್ಲಕ್ಷ  ಸಲ್ಲದು ಕೃಷಿ ಪರಂಪರೆ //

                  ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...