Tuesday, April 21, 2020

* ಸಾರ್ಥಕತೆ *


ನಾನು ನನ್ನದೆನ್ನುವ ಮಮಕಾರ
ಬಿಟ್ಟು ನಡೆ ಮುಂದೆ, ನುಗ್ಗಿ ನಡೆ ಮುಂದೆ,
ಹೆಡಮುರಿ ಕಟ್ಟುವರು
ನಿನ್ನ ಹಿಂದೆ ಹಿಂದೆ.  //

ಸಾವು ಗೆದ್ದವರಿಲ್ಲ ನೋವು ಕೊಟ್ಟವರು
ಉಳಿದಿಲ್ಲ ಬದುಕಿ ಬಾಳಿಲ್ಲ
ಕೊಂದವನು ನಿಂದಕನು
ನೊಂದುಕೊಳ್ಳುವರು ಇಂದೆ ಇಂದೆ //

ಶ್ಮಶಾನದ ದಾರಿಯಲಿ ಸಾವಿರ, ಸಾವಿರ
ಸತ್ತ ಮೇಲೂ ಉತ್ತರಿಸುವರು
ಸಾಧನೆಯ ಶಿಖರಕ್ಕೆರಿದ ಗುಟ್ಟು
ಸಾವೆ ಸನ್ಮಾನವಾಗಿತ್ತಂದು. //

ಬದುಕ ಕಟ್ಟಲು ಬಾಳಿದ ಮೂರು ದಿನ
ಬೆವರಾಗಿ ಹರಿದಿತ್ತು ಶ್ರಮದ ದಾನ
ಕಣ್ಣಿರು ಕಡಲಾಗಿ ಉಸಿರು ಬಿಸಿಯಾಗಿ
ಕಾರ್ಮೋಡ ಕರಗಿತ್ತಂದು. //

           ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...