1) ಬಾಳು
ಉಸಿರೆಂಬ ಬಾಳು ಹಸಿರಾಗಿರಾಲು
ನೇಸರನ ಕಡೆಗಾಳು ಹಸೆ ಕಾರಣ
ಮನೆ ಮಂತ್ರಾಲಯವೆನಲು
ಪ್ರಿಯೆ ನಿನ್ನ ವಲವೆ ಕಾರಣ
ಬಾಳೆಂಬ ಬಂಡಿ ಬಹುದೂರ ಸಾಗಲು
ನಿನ್ನಂತರಾತ್ಮದ ಗೆಲುವೆ ಕಾರಣ
2) ವಿಶ್ಮಯ
ನಾನಾರೆಂಬುದು ಅರಿವು ಮಾಡಿದೆ
ನನ್ನಂತರಾತ್ಮದ ಚಲುವೆ
ನನಗೀಗ ಬಂತು ಗೆಲುವು
ನಾನೊಡಿದ ದಾರಿ ಬಹು ದೊರ
ತಿಳಿಯದೆ ಬಂತು ಈ ಊರು
ತಿಳಿಯಿತಿಗ ನಿನ್ನ ಒಲುವೆ ವಿಶ್ಮಯ
3) * ಪೆದ್ದನಾದ ಶುದ್ದ *
ನಾನೊಬ್ಬ ಪೆದ್ದ ನನಗೊಬ್ಬ ಸ್ನೇಹಿತನಿದ್ದ
ದಿನವು ತರೆಹೆವಾರಿ
ಸಲಹೆ ತಲೆಯಲ್ಲಿ ತುರುಕುತಲಿದ್ದ
ನನ್ನಪ್ಪ ಅಮ್ಮ ಮಾಡಿದ್ದೆ ಒಂದು
ಸ್ನೇಹಿತ ತಲೆಯಲ್ಲಿ ಹಾಕಿದ್ದೆ ಇನ್ನೊಂದು
ಸಪ್ತಪದಿ ತುಳಿಸಿ ಆಗುವನು ಶುದ್ಧ
ಅಪ್ಪಅಮ್ಮ ಮಾಡಿದರು ಜೋಡಿ
ಹುಡುಗಿ ಮಾಡಿದಳು ಮೋಡಿ
ಈಗ ನಾನು ಆದೆ ಪರಿಶುದ್ಧ
ಬಸನಗೌಡ ಗೌಡರ
No comments:
Post a Comment