Sunday, April 26, 2020

* ತವರಿನ ಸಿರಿ *

ತಂಡ-ಕುವೆಂಪು
ಸ್ಪರ್ಧೆ-  ಜಾನಪದ ಗೀತೆ

 * ತವರಿನ ಸಿರಿ *

ತವರಿನ ಕನಸ ಮರಿಯೊದು ಹ್ಯಾಂಗ
ತಾವಾಡಿದ ಗುಬ್ಬಿಮನಿ ಕೆಡಿಸಿದಂಗ
ತರವಲ್ಲ ಪತಿರಾಯ ಹಟ ಹಿಂಗ //

ತಾಯಿಯ ಒಡಲಾಗ ತಿಂದರೂ ಬೇವು
ತವರಿನ ಭಾವ ,ತಿಂದಾಂಗ ಮಾವು
ತರವಲ್ಲ ಪತಿರಾಯ ತೆಗಳಿದ್ದು ನೀವು /

ಹಾಲುಂಡ ತವರಿಗೆ ಹಾರೈಕೆ ಹಾಕಿದರ
ಹಾಲುಕ್ಕಿದಾಂಗ ತವರಿನ ಕದರ
ಹಾದಿ ಬೀದ್ಯಾಗ ಬೆಳೆಯಲಿ ಹೆಸರ //

ಅಪ್ಪ ಕೊಟ್ಟ ಕೊಪ್ಪರಗಿ ಹೊನ್ನು
ಒಪ್ಪಾಗಿ ಜೋಡಿಸಿ ಇಟ್ಟೆನಿ ನನ್ನಣ್ಣ
ಆಪತ್ತಿಗೊಂದು ಸವಾಲು ಹಾಕೆನ //

ಪಂಚಮಿ ಹಬ್ಬಕ ಮುಂಚೆನ ಬರತಾನ
ಮುಚಗೊಂಡ  ಉಡಗೋರಿ ತರತಾನ
ತಂಗಿಯ ಸಿರಿಯ ನೊಡಿ ನಗತಾನ//

ಜೋಳದ ಹೊಲದಾಗ ಬಿಳಿ ಹಕ್ಕಿ
ಹೊಡೆದಾಗ ತಾ ಬಳಲಿದ್ದ ಕಂಡು
ಸೀತನಿ ತಿನಿಶ್ಯಾನ ತಾ ಅಣ್ಣ ಹೆಕ್ಕಿ //

             ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...