Sunday, April 26, 2020

* ಬದುಕು ಬವಣೆ *

ಸ್ಪರ್ಧೆ - ಚಿತ್ರ ಕವನ

ಬಯಲು ಛತ್ರವೆ ಬದುಕಿನಾಲಯ
ಇದುವೆ ನಾನು ನಂಬಿದ ಶಿವಾಲಯ
ನನಗಿಂತ ಮೇಲೆ ಯಾರದಿಲ್ಲ ಆಲಯ
ಅರಮನೆ ಕೊಡುವುದೆ ಇಲ್ಲದ ನೆರಳ//

 ಭರವಸೆಯ ಬೆಳಕನ್ನೆ ಒಡಲಲ್ಲಿ ತುಂಬಿ
ಬಾಗಿ ಕುಳಿತವನು, ಬದುಕು ನಂಬಿ
ಆ ಚಳಿ ಗಾಳಿಗೂ ಬಗ್ಗದೆ ಬತ್ತದೆ
ಭಾವಿ ಬದುಕಿಗೆ ಬರುವದೆಮ್ಮ ಕಾಲ //

ಒಪ್ಪತ್ತಿನ ಊಟಕ್ಕೂಈಗ ತತ್ವಾರ
ಪ್ರೀತಿ ಬಿಗಿದಪ್ಪುಗೆ ನಮಗಾಹರ
 ಪಾತ್ರೆಗಳೆ ನಮ್ಮಇಂದಿನ ಶತೃಗಳು,
 ನಾಳೆ ಕಾಣುವೆ ನಮಗೂಂದು ಕಾಲ//

ಕಾಣದ ಕೈಗಾಗಿ ಕಾತರಿಸುವೆ ಇಲ್ಲಿ
ಮಡದಿ ಮಕ್ಕಳ ಮಾನ ಮನದಲ್ಲಿ ಬಿತ್ತಿ ಹಿಮಾಲಯದೆತ್ತರಿಕ್ಕೆರಿಸುವೆ ಅಲ್ಲಿ
ನಿತ್ಯಕಾಯುತಿದೆ ನಮಗೊಂದುಕಾಲ//
                     
          ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...