Monday, April 27, 2020

ನ್ಯಾನೋ ಕಥೆ

ಅದೊಂದು ಸ್ಪರ್ಧೆ, 'ನಾ ಹೆಚ್ಚು ನೀ ಹೆಚ್ಚು' ಹಾಲು ಹೇಳಿತು ನಾನೇ  ಹೆಚ್ಚು, ಹೇಗಪ್ಪ ಹೇಳು ,ಕೇಳದರು ಆಯೋಜಕರು ..ನಾನಿಲ್ಲದೆ ಮುಂಜಾವು ನೆನೆಸಿಕೊ ಚಹಾ ಇಲ್ಲ ,ಅನ್ನಕ್ಕೆ ಹಾಲು ಇಲ್ಲ ಮಕ್ಕಳಿಗೂ ಕುಡಿಲಿಕ್ಕಿಲ್ಲ, ಊಟ ಮಾಡುವುದು ಹೇಗೆ ? ಉಹೂ..ನೆನೆಸಿಕೊಳ್ಳುವದಕ್ಕೂ ಆಗುವದಿಲ್ಲ ಆ ಕಾರಣಕ್ಕೆ ನಾನೆ ಹೆಚ್ಚು.ಎಂದಿತು.
ಆಲ್ಕೋಹಾಲ್ ಬಂದಿತು ನಾನೆ ಹೆಚ್ಚು,ಅದು ಹೇಗೆ? ಕೇಳಿದ್ರು ಆಯೋಜಕರು . ಹಾಲಿನ ಸ್ನೇಹ ಮಾಡಿದವರ ಪರಿಸ್ಥಿತಿ ನೊಡಿದ್ದಿಯಾ? ಮನೆ ಮನೆ ತಿರುಗಬೇಕು. ಚೌಕಾಸಿಗಿಳಿತಾರ ...ಕಿರಿ ಕಿರಿ.
ನಾನಾದರೋ ಜಗಮಗಿಸುವ ಬೆಳಕಿನಲ್ಲಿ ವಾಸಿಸುವೆ ,ನಾನಿರುವ ಜಾಗದ ಕಡೆ  ಜನರೆ ಓಡಿ ಬರುತ್ತಾರೆ  ಚೌಕಾಸಿ ಮಾಡಿದ್ದು ಉಂಟಾ ! ಹಾಗಾಗಿ ನಾನೆ ಮೇಲು ಆಯೋಜಕರು ಸುಸ್ತೋ ಸುಸ್ತು.

        🖋️ ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...