Monday, April 27, 2020

ನೆಚ್ಚಿನ ಗುರು

ನನಗೂ ಒಬ್ಬ ಗುರು ಬೇಕು
ಅಕ್ಕ,ನನಗೂಬ್ಬ  ಗುರು ಬೇಕು //ಪ/

ತಾನೇಳುವ ವಿಷಯ ಪಂಡಿತನಿರಬೇಕು
ನಗುನಗುತ ಪಾಠ ಮಾಡಬೇಕು /

ವೇಳೆಯ ಮಹತ್ವ ತಿಳಿದಿರಬೇಕು
ತಾಳ್ಮೆ ಮಾತ್ರ ಬಾಳ ಇರಬೇಕು/

ನಿತ್ಯಸಂಶೋಧನೆ ಮಾಡತಿರಬೇಕು
ಸತ್ಯದಿಂದ ನಡೆಯುತಿರಬೇಕು /

ಶಿಸ್ತಿನ ಬಗ್ಗೆ ಹೇಳತರಬೇಕು
ಪೂರ್ಣ  ಅಳವಡಿಸಿಕೊಂಡಿರಬೇಕು /

ಪ್ರಚಲಿತ ಜ್ಞಾನ  ತಿಳಿದಿರಬೇಕು
ಬೋಧನೆಯಲ್ಲಿ ಅಳವಡಿಸಿರಬೇಕು /

ದುಷ್ಟ ಗುಣಗಳ ಸುಟ್ಟಿರಬೇಕು
ಶಿಷ್ಟಾಚಾರ ಮೊದಲ ಇರಬೇಕು/

ಮಕ್ಕಳ ಜೊತೆ ಇರತಿರಬೇಕು
ಚರ್ಚೆ ಅವರ ಪದ್ಧತಿಯಾಗಿರಬೇಕು /

ಹವ್ಯಾಸ ಮಾತ್ರ ಒಳ್ಳೆಯದಿರಬೇಕು
ಸಾಹಿತ್ಯ ಕಲೆ  ತಿಳಿದಿರಬೇಕು /

ಪ್ರಿತಿಯಿಂದ ಪಾಠ ಮಾಡತಿರಬೇಕು
ಸುಳ್ಳಿನಿಂದ ದೂರವಿರಬೇಕು/

ನನಗೂ ಒಬ್ಬ ಗುರು ಬೇಕು
ಅಕ್ಕ,ನನಗೂಬ್ಬ  ಗುರು ಬೇಕು... //

                ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...