ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರೆ ಹಾಗೂ ಮಾದ್ಯಮ ಸ್ನೇಹಿತರೆ
ಇಂದು ಅಗಸ್ಟ 15, ನಾವೆಲ್ಲ 79 ನೇ ಸ್ವಾತಂತ್ರ್ಯೋತ್ಸವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತ್ತಿದ್ದೇವೆ ಈ ಸಡಗರ ಮತ್ತು ಸಂಭ್ರಮವು ಹಾಗೆಯೆ ಬಂದದ್ದಲ್ಲ ಸಾವಿರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳ ಫಲ.1947 ರ ಕ್ಕಿಂತ ಪೂರ್ವ ದಲ್ಲಿ ಬ್ರಿಟಿಷರು ನಮ್ಮನ್ನಾಳುತ್ತಿದ್ದರು ನಾವೆಲ್ಲ ಗುಲಾಮರಾಗಿದ್ದೆವು. ಭಗತ ಸಿಂಗ , ಚಂದ್ರಶೇಖರ ಅಜಾದ, ಖುದೀರಾಮ ಬೋಸ್, ಉದಯ ಸಿಂಗ್ ರಂತಹ ಕ್ರಾಂತಿಕಾರಿಗಳು.... ಗೋಪಾಲ ಕೃಷ್ಣ ಘೋಖಲೆ, ಬಾಲಗಂಗಾಧರ ತಿಲಕ, ಸುಭಾಸ್ ಚಂದ್ರ ಬೋಸ್ ಮಹಾತ್ಮಾ ಗಾಂಧೀಜಿಯವರಂತ ರಾಷ್ಟ್ರ ಭಕ್ತ ನಾಯಕರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಗಲು ದಾರಿಯಾಯಿತು, ಆ ಕಾರಣಕ್ಕಾಗಿ ಅಂತಹ ನಾಯಕರನ್ನು ಇಂದು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಇಂದು ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಅಂದು ಹಸಿವಿನಿಂದ ಹಡಗಿಗಾಗಿ ಹಪಿಹಪಿಸುತ್ತಿದ್ದ ನಾವು ಹಸಿರು ಕ್ರಾಂತಿಯನ್ನು ಮಾಡಿ ವಿದೇಶಗಳಿಗೆ ಆಹಾರ ರಫ್ತು ಮಾಡುವ ದೇಶವಾಗಿದ್ದೇವೆ.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳ ರಾಷ್ಟ್ರಗಳಿಗೆ ಸಮವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಚಂದ್ರನ ಮೇಲೆ ಉಪಗ್ರಹ ಕಳುಹಿಸಿದ್ದೇವೆ, ವಿದೇಶಗಳು ಕ್ರಯೋಜನಿಕ್ ತಂತ್ರಜ್ಞಾನ ನೀಡಲು ನಿರಾಕರಿಸಿದರೂ ಸ್ವದೇಶಿ ಕ್ರಯೋಜನಿಕ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಣು ಶಕ್ತಿ ಮತ್ತು ಅಂತರಿಕ್ಷ ಯಾತ್ರೆ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ.ವೈರಿ ರಾಷ್ಟ್ರ ಗಳು ಬಂದು ವೈದ್ಯಕೀಯ ಸೌಲಭ್ಯ ಪಡೆದು ಹೋಗಬಹುದಾದ ವೈದ್ಯಕೀಯ ಸೌಲಭ್ಯಗಳು ನಮ್ಮಲ್ಲಿವೆ . ಪಹಲ್ಗಾಮನಲ್ಲಿ ಭಯೋತ್ಪಾದಕರು ನೀಡಿದ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ್ದೇವೆ, ಇದು ನಮ್ಮ ಹೆಮ್ಮೆಯ ಸಂಗತಿಯಾದರೂ ಇನ್ನೂ ನಮ್ಮ ದೇಶವನ್ನು ಕೆಲವೊಂದಷ್ಟು ಸಮಸ್ಯೆಗಳು ಕಾಡುತ್ತಿವೆ. ನಿರುದ್ಯೋಗ ಸಮಸ್ಯೆಯಿರಬಹುದು,ಜಾತೀಯತೆ,ಬಡತನ,ಪ್ರಾದೇಶಿಕತೆ, ಭಯೋತ್ಪಾದಕತೆ ಮುಂತಾದವು. ಇವುಗಳನ್ನು ಬುಡ ಸಮೇತ ಕೀಳಲು ನಾವೆಲ್ಲ ಸಿದ್ಧರಾಗಬೇಕಾಗಿದೆ ...ಈ ದೇಶ ನನಗೇನೂ ನೀಡಿದೆ ಎಂದು ಪ್ರಶ್ನೆ ಹಾಕಿಕೊಳ್ಳದೆ ದೇಶಕ್ಕಾಗಿ ನಾನು ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ, ದೇಶಕ್ಕಾಗಿ ದುಡಿಯುವುದೆಂದರೆ ಗಡಿಯಲ್ಲಿ ಹೋಗಿ ಯುದ್ದ ವನ್ನೆ ಮಾಡಬೇಕೆಂದೇನೂ ಇಲ್ಲ ಪ್ರತಿಯಬ್ಬರೂ ನಮ್ಮ ನಮ್ಮ ಕರ್ತವ್ಯ ವನ್ನು ನಿಷ್ಠೆಯಿಂದ, ಬದ್ಧತೆಯಿಂದ, ಸಮರ್ಪಣಾ ಮನೋಭಾವದಿಂದ ಮಾಡಿದರೆ ಅದೇ ರಾಷ್ಟ್ರ ಕ್ಕೆ ನಾವು ಮಾಡಬಹುದಾದ ದೊಡ್ಡ ಸೇವೆ ಅದನ್ನು ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕಾರ್ಯ ವನ್ನು ಮಾಡಿ ದೇಶದ ಅಭಿವೃದ್ಧಿಗೆ ನಮ್ಮ ಪಾಲನ್ನು ಅರ್ಪಿಸೋಣ.
ಜೈ ಹಿಂದ್ ,ಜೈ ಕರ್ನಾಟಕ
No comments:
Post a Comment