ನೀ..ಚಂಚಲೆ ತಿರುಗವೆ ಈ ಜಗವೆಲ್ಲ
ಮಾಯಾವಿ ಇಣುಕದ ಲೋಕವಿಲ್ಲಹಯಕೆ ಕಡಿವಾಣ ಹಾಕಿಯೆ ಇಲ್ಲ.
ನಿನ್ನ ಸರಿಸಮವುಂಟೆ, ವೇಗದಲ್ಲಿ //
ನಿನ್ನ ಒಪ್ಪಿಗೆಯಲ್ಲಿ ನಿಂತಿದೆ ಜಗವೆಲ್ಲ.
ಹಿಟ್ಲರ್, ಮುಸೊಲಿನ್ ಟೋಜೊರೆಲ್ಲ
ನಿನ್ನಂತೆ ಅಂದು ತಲೆ ಆಡಿಸಿದರಲ್ಲ
ನೀ ಬಸ್ಮಾಸುರನ ಪಾತ್ರವಹಿಸಿದೆಯಲ್ಲ//
ನನ್ನ ಅಂತರಂಗದ ಅರಿಕೆ ನಿನಗೆ
ನಿನ್ನ ಪ್ರೀತಿಸಲು ಹರಸಾಸಪಡುವೆ
ನನ್ನ ಅಂಕೆಗೆ ಸಹಜದಲಿ ಸಿಗುವೆನಗೆ
ನೀ ವಲಿದರೆ ಗೌರವದ ಶಿಖರವೆನಗೆ //
ನಿನ್ನ ಹಿಡಿತರಲು ನನಗೆ ಗುರುಬೋಧೇ
ಧ್ಯಾನ, ದಾನಧರ್ಮ, ಯೋಗ ಮಾಡು
ನಿಷ್ಟೆಯಲಿ ಹಿಡಿದ ಕಾಯಕ ಮಾಡು
ಬಿಟ್ಟಿರಲು ತಲೆ ಆಗುವುದು ಸುಡಗಾಡು//
ಮರ್ಕಟದ ವಂಶದ ನೀನು ಚಲುವೆ
ನನ್ನರಮನೆಯಲಿ ಅಡಗಿ ಕುಳಿತಿರುವೆ
ಬೇರಲ್ಲ ಹುಡುಕಿ ಬಸವಳಿಯತಿರುವೆ
ಬಾಕಳ್ಳಿಮನಸೆ ಸವಾರಿನಡೆಸುತಿರುವೆ//
ಬಸನಗೌಡ ಗೌಡರ
No comments:
Post a Comment