Sunday, May 17, 2020

* ಬದಲಾವಣೆ *

ಹೆಣ್ಣು ಹಡೆದವರು ಸಣ್ಣ ರೈತರಿವರು
ಕಣ್ಣುಕಾಣದವರು ಕರ್ಮವೆಂದವರು
ಕಿವಿಯಿದ್ದು ಕೇಳದ ಕಿವಡರಿವರು
ಹೆಣ್ಣುಸಂರಕ್ಷಣೆ ಶಾಸನ ಓದಿದವರು/

ಸ್ತ್ರೀಸಭಲತೆ  ಬೇರು ಇಳಿಸಿಹರು
ಶಾಸನದ ಸರಕು ಅರಿಯದವರು.
ಬಳಸದೆ ಸಂತೃಪ್ತಿ ಪಡುವವರು.
ಬಳಸಿದವರೆಲ್ಲ ಬಸವಳಿದವರು /

ತೋಟದ ಮಾಲೀಕರಿವರು ಕೋಟೆಯ
ರಕ್ಷಣೆಗೆ ಭದ್ರ ಕಾವಲು ನೀಡದವರು
ಹೂವು ರಕ್ಷಣೆಗೆ ಹಪಹಪಿಸಿದವರು
ಕಿತ್ತರೂ ಚಿಂತೆ ಕೀಳದಿದ್ದರೂ ಚಿತೆ /

ಮಾಲಕನ ಚಿಂತೆ ದೇವರಿಗೆ ಸಲ್ಲಬೇಕು
ದೇವರಾದರೂ ಎಷ್ಟು ಜನ ಇದ್ದಾರು
ಗಲ್ಲಿಗೂಂದು ಗುಡಿ ಕಟ್ಟಿ ದವರಷ್ಟೆ
ಮಿಕ್ಕದವೆಲ್ಲವೂ ಕುರಿರುಚಿ ಕಂಡವರು

ನಾವು ಬೆಳೆಯಬೇಕು ಬದಲಾಗಬೇಕು
ಹೂವು ಇದ್ದಲ್ಲೆ ದೇವರು ಬರಬೇಕು
ನಿತ್ಯವೂ ಅರಳಿ ಸತ್ಯದಿಂದಿರಬೇಕು
ಸಕಲ ಅಳವಡಿಕೆ ತೋಟವಾಗಬೇಕು/

                 ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...