Monday, May 18, 2020

* ಕಲಿಕೆ *

ಅಳುತ ಕಲಿಯುವ ಕಲಿತು
ಮರೆಯುವ ಅನುದಿನ ಪರೀಕ್ಷೆಗೆ
ಕಲಿಯುವ,ಕಲಿಸುವಿಕೆಗೆ
ಲಗಾಮು ಹಾಕುವ//

ಕಲಿಕೆಯದು ಗ್ರಹಿಕೆಗಳ ವಿಕರಣ /
ಮಕ್ಕಳೆಂದರೆ ಚಿಕ್ಕವರೆಂಬ ಭಾವ
ತುಕ್ಕು ಹಿಡಿದು  ಹಕ್ಕಿನಿಂದ ಕಲಿಸ
ಹೂರಟವನ ತಡೆಯುವ //

ಶಿಕ್ಷಣವೆಂದರೆ ಅಕ್ಷರ ಜ್ಞಾನವಲ್ಲ.
ಹಾಗಂದ ಪಕ್ಷಕ್ಕೆ ನನ್ನ ಸವಾಲು
ನಿರಕ್ಷರಿಗಳಿಗಿಂತ ಸಾಕ್ಷರಿಗಳೆ
ನಮ್ಮ ನಿಜ ಸವಾಲು ? //

ಪ್ರೀತಿಯು ಶಿಸ್ತಿನ ಸಂಸ್ಕಾರ ,
ಶಿಕ್ಷಣದ ತಾಯಿ ಬೇರು
ಅನುದಿನವು ಆಗಲಿ ಮನನ
ನಿತ್ಯ ಅನುರಣನ//

ಎಲ್ಲ ತಿಳಿದವರು ಬಹು ವಿರಳ,
ಎಲ್ಲ ತಿಳಿದಂತೆ ನಟಿಸುವರು ಬಹಳ
ಪಾಲಕರು ಹರಳು ಆರಿಸುವ,
ಶೋಧಿಸುವ ಕೆಲಸ ಸತತ.//

ಜಾರದಿರಲಿ ಜಾಳಗೆಯಲ್ಲಿ ಜಾಗೃತಿ
ನಮ್ಮದಾಗಿರಲಿ ವಿನಮ್ರತಿ
ಸರಳವೂ ಅಲ್ಲ ಕಠಿಣವೂ ಅಲ್ಲ
ಸತತ ಸ್ವಿಕರಿಸೋಣ ಸನ್ಮತಿ.//

         ಬಸನಗೌಡಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...