Saturday, May 2, 2020

* ಮಹತ್ವಾಕಾಂಕ್ಕ್ಷಿ *

ಜಗದಗಲ ಮೇರೆ ಮೀರಿ
ಅಶ್ವಗಳನೇರಿ ವಿಶ್ವ ಸುತ್ತಲು
ಬಯಸುವೆವು ನಾವು //

ಆಸೆಗಳಿಗಿಲ್ಲ ಮಿತಿ ,ಇಂದಲ್ಲ ನಾಳೆ
ವಸಾಹತು ಕಟ್ಟುವೆವು ಜಗದಾಟಿ
ಬ್ರಹ್ಮಾಂಡ,ನೀಹಾರಿಕೆ ದಾಟಿ  //

ನೋವುಂಡು  ನಲುಗಿದ ನರ
ಮಾನವನ ನೆಲೆ ಕಾಣಲು ದೊರ
ಸಾಗುವೆವು ಅನಂತ ಭಾನು ಸೀಳಿ  //

ಅಶ್ವಗಳ ಹೊಟ್ಟೆಗಿಲ್ಲ ಹಿಟ್ಟು
ತಡಿ ಹಿಡಿದು ನಿಲ್ಲಿಸುವ ಮನಸಿಲ್ಲ.
ಪಟ್ಟು ಸಡಲಿಸಲೊಲ್ಲೆವು ನಾವು //

ನೆರೆಮನೆಯು ಹೊಸ ವಸಹಾತು
ಕಟ್ಟುವ ಮುನ್ನ. ದ್ವಜ ಹಾರಿಸಿ
ಕೆಕೆ ಹಾಕಲು ಬಯಸುವೆವು ನಾವು //

ಸಂತರೆಳಿದ ದೇಹನಶ್ವರ ಮಾತು
ನಿಂತು ಕೇಳುವ ವ್ಯವದಾನ ನಮಗಿಲ್ಲ
ವಿಶ್ವವಿಶಾಲ ಪರಿದಿ ತಿಳಿಯದವರು ನಾವು //

                    ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...