Friday, May 1, 2020

* ನನ್ನೂರು *

* ನನ್ನೂರು *
ನನ್ನೂರ ಜನ ,ನನ್ನೂರಿನ ಜನ
ತೀರಿಸುವುದು ಹೇಗೆ ಇವರ ಋಣ
ಪ್ರೀತಿತುಂಬಿದ ಬೊಗಸೆಗಣ್ಣಿನ
ಶ್ರಮಕ್ಕೆ ಹೆಸರೆ ಈ ನನ್ನ ಜನ //ಪ//

ಗುಡ್ಡದ ಮಣ್ಣಿಗೆ ಅಡ್ಡಡ್ಡ ಬಿತ್ತಿ
ದವಸ, ತೃಣ ದಾನ್ಯ ಬೆಳೆಯುವ ಜನ
ಮುಂಗಾರೊಂದೆ ನಂಬಿ ಬಿತ್ತಿದವರು
ಕಪ್ಪುಮಣ್ಣಿಲ್ಲದೆ ಹಿಂಗಾರು ಬೆಳೆವ ಜನ

ಬಿದ್ದ ಮಳೆಗೆ ಸವಾಲು ಹಾಕಿ
ರಾತ್ರಿಹಗಲೆನ್ನದೆ ಮೈಮುರಿದ ಜನ
ತೇವಾಂಶವುಳಿಸಲು ಹರಸಾಹಸ
ಸುತ್ತಲೂ ಬರ, ಇವರಿಗೆಲ್ಲಿದೆ ಬರ?//

ಮನೆಗೊಂದು ಕುರಿಯ ಹಿಂಡು
ಪ್ರತಿ ಮನೆಯು ಸೈನಿಕರ ದಂಡು
ಉಸುಗು  ಭೂಮಿಯ ತುಂಡು
ಬೆಳೆ ಬೆಳೆಯುವದರಲ್ಲಿವರು ಗಂಡು //

ಸ್ವಾಭಿಮಾನದ ಬದುಕು ತುಳಿದವರು
ಮನಸ್ಸು ಮಲ್ಲಿಗೆ, ಮಾತು ಕಠೋರ
ಕಲ್ಲಿನಲ್ಲಿಯೆ ಮಠ ಕಟ್ಟಿ ಕಾವಿಗೆ
ಶರಣೆಂದ ಕರ್ಮಯೋಗಿಗಳಿವರು//

ಜಾತಿಭೇದಗಳಿಲ್ಲ ಧರ್ಮಗಳ
ಬಂಧನವಿಲ್ಲ ಮುಸ್ಲಿಂ ಹಬ್ಬಕ್ಕೂ
ದೋಲಿ ಹೊತ್ತು ತಿರುಗುವರೆಲ್ಲ
ಸಾಮರಸ್ಯ ಕಲಿಯಬೇಕು ಜಗವೆಲ್ಲ//

              ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...