Thursday, April 30, 2020

* ಆಶ್ರಮ *

ಹಾಲುಣಿಸಿ ಹಾರೈಸಿ ತಾ ಬೆಳಸಿ 
ಮೊದಲ ತೊದಲು ನುಡಿಯ ಕಲಿಸಿ,
ಶೈಶವ ಗೆಲ್ಲಿಸಿದಳು ಮಾಹಾ ತಾಯಿ
ಕಂಡೆ  ಮೂಲಶ್ರಮದ  ಗೆಲುವು //

ಬಾಗಿ ನಡೆಯುವ ಭಕ್ತಿ ಕಲಿಸಿ
ಭವದರಿವ ಬೆಳಕ ಬಾಲ್ಯದಲಿ ಹರಸಿ
ಬದುಕು ಕಟ್ಟುವ ಗುರು ನೀ ತಿಳಿಸಿ
ಕಂಡೆ ಬ್ರಹ್ಮಚರ್ಯದ  ಗೆಲುವು //

ಹಮ್ಮು ಬಿಮ್ಮು ಬದಿಗೆ ಸರಿಸಿ
ಹೊಂದಾಣಿಕೆ ಮನೆಯಲಿ ಕಲಿಸಿ
ಮುನ್ನೆಡೆಯುವ ಪತ್ನಿಯ ಎನ್ನರಸಿ
ಕಂಡೆ ಎರಡಾಶ್ರಮದ ಗೆಲುವು //

ಭವ ಬಂಧನದ ಬಾಳ ಬಳಸಿ
ತೆರಳಿದೆನು ವನದ ಶಾಂತಿ ಅರಸಿ
ಗುಣವರಿತ ವನ ಮನ ಅರಳಿಸಿ
ಕಂಡೆ ಮೂರಾಶ್ರಮದ ಗೆಲುವು //

ಸರ್ವ ಸಂಗ ತನ್ನ ಅಂಗದಿ ತೊರೆದು
ಭಂಗ ತಾರದೆ ಸಂಗದೇಳಿಗೆಗೆ ದುಡಿದು
ಶಾಂತಿ ಸನ್ಯಾಸದ ವೈರಾಗ್ಯ ವುಂಡು
ಕಂಡೆ ನಾಲ್ಕನೇ ಆಶ್ರಮ ಗೆಲುವು//
               
                     ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...