Sunday, May 24, 2020

* ಕವಿಕುಡಿಗಳು *

ಕನ್ನಡ ಮಾಮರದ ಹೆಮ್ಮೆಯ 
ಕವಿ ಕುಡಿಗಳು ನಾವು  //

ಭಾವ ಲೋಕಕ್ಕೆ ಜಾರಿ
ಕಾವ್ಯ ಲೋಕದಲ್ಲಿ ಮಿಂದು
ಸುಂದರ ಲೋಕದಲ್ಲಿ ತೇಲುವ
ಕನ್ನಡದ ಕಂದಮ್ಮಗಳು ನಾವು //

ಬರಹ ಬಯಕೆಯನೇರಿ
ಸಾರುವೆವು ಸಾಹಿತ್ಯ ಸತ್ವವನ್ನು
ಬದುಕು ನೀಡಿದಷ್ಟು ಸವಿದು
ಸಾಕ್ಸತ್ಕಾರ ಪಡುವೆವು ನಾವು//

ನಿಸರ್ಗವ ಸೇರಿ ಕೃತಕತೆ ಮೀರಿ
ಸ್ವರ್ಗ ಸಮಾನತೆ ಸವಿ ತಿರಳುನ್ನು
ಸತತ ಸವಿದು ಸರಿದಾರಿ ನಡೆದು
ಭಾವಗಳ ಬೆಸೆಯುವೆವು ನಾವು//


             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...