Sunday, May 24, 2020

* ಪಾವನ ನಾಡು *

ಸ್ಪರ್ಧೆ: ನಾಡಗೀತೆ

ಕ್ರಮ ಸಂಖ್ಯೆ: 13

 * ಪಾವನ ನಾಡು *

ಕನ್ನಡನಾಡಿದು ಕವಿ ಕೋಗಿಲೆ ಬೀಡಿದು
ಕರುನಾಡಿದು ಕಲೆ ರಸಿಕರ ನೆಲೆವೀಡಿದು
ಸಾಧುಸಂತರು ಇಲಕಲ್ ಮಹಾಂತರು
ಶಿವಕುಮಾರಶ್ರೀ ಬೆಳಗಿದ ನಾಡಿದು //ಪ//

ಬಯಲು ಮಲೆ ತೀರ ಮುಕುಟ ಮಣಿ
ಬಂಗಾರ ಬೆಳೆದ ಕೋಲಾರ ಚಿನ್ನಗಣಿ
ಭಾರತ ಮಾತೆಯು ಇವಳಿಗೆ ಜನನಿ
ಕನ್ನಡಿಗರುಸಿರಿನ ಹಸಿರು ಶಾಲಿನಿ//

ಚಾಲುಕ್ಯ ಬಲ, ಹೊಯ್ಸಳ ಶಿಲ್ಪಕಲೆ
ಬಸವ ಮಧ್ವ ಕನಕರ ನೆಲೆಯಿದು
ಹಕ್ಕ ಬುಕ್ಕ,ಕೃಷ್ಣ ದೇವರಾಯರಾಳಿದ
ಧರ್ಮ ರಕ್ಷಣೆಯ ವೈಭವದ ನಾಡಿದು//

ನವರಾತ್ರಿ ಬೆಳಗಿದ ಮೈಸೂರ ಅರಸರ
ಆಧುನಿಕ ಸ್ಪರ್ಶದ ತಳಪಾಯವಿದು
ನಲ್ಮೆಯ ಶ್ರೀಗಂಧದ ತಳವೀಡಿದು
ಭಾರತ ಪುತ್ರರ ಹೆಮ್ಮೆಯ ನಾಡಿದು//

                ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...