Saturday, May 23, 2020

* ಹೆಸರು *

ಎಷ್ಟು ಹೆಸರು ಹತ್ತಿವೆ ಹಿಂದೆ
ನಮ್ಮ ಅಪ್ಪ ಅಮ್ಮ ಇಟ್ಟರೊಂದು/
ಗೆಳೆಯರಿಟ್ಟರು ಇನ್ನೊಂದು
ಏಣಿ ಆಟದಲ್ಲಿ ಏರಿದಾಗೊಂದು
ಇಳಿದಾಗ,ಒಂದು
ಏಣಿ ಮುರಿದಾಗ ಮತ್ತೊಂದು //

ಆಶ್ರಯದಲ್ಲಿ ಒಂದು, ಶ್ರಮದ್ದೊಂದು
ಅವಸ್ಥೆ ತಂದಿತು ಇನ್ನೊಂದು /
ಪಾಠ ಮಾಡಿ ಬೋಧಕನಾದೆ
ಮಡದಿಗೆ ಪತಿಯಾದೆ
ಒಪ್ಪಿ ನಡೆದರೆ ಆದರ್ಶ ದಂ.........ಪತಿಯಾದೆ //

ನೂಸಲಿನಲ್ಲಿ ಹೆಸರು ಬರೆವನೆ ಬ್ರಹ್ಮ!
ಗಾಸಿಗೊಂಡ ಗಾಬರಿಯಲಿ/
ಹಸಿಮಣ್ಣೆ ಮಾಡಿಟ್ಟ ಭರದಲ್ಲಿ
ನಿನಗಿಷ್ವ ವಾದ ನಾಮ ಹರಳಿನಲಿ
ಒತ್ತು ಹರವಾದ ಹಣೆಯಲ್ಲಿ
ನಿನಗೊಪ್ಪುವ ತರದಲ್ಲಿ //

        ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...