ಪತಿ ಪರದೈವ ಎಳೆ ಬದುಕಿನ ತೇರ
ಪಟ್ಟಣ ದೂರ ಬೆಟ್ಟ ಬಹು ಇಳಿಜಾರು
ಪರ ಚಿಂತೆ ಬಿಡು, ಬೇಡ ಬೇಜಾರು
ಪರಶಿವನ ನಾಮ ಒಂದೇ ಜಾಗರಣೆ//
ಬಾಹುಬಲದಲಿ ಸಾಕಿದೆ ಹತ್ತು ಹಲವು
ಪಕ್ಕ ಬಲಿತ ಮೇಲೆ ಹಕ್ಕಿ ಹಾರಿದವು
ಸಿಕ್ಕ ಸಿಕ್ಕಲ್ಲಿ ತೆಲುತಿದೆ ತಾ ಮುದಿಹಾವು
ನಿನ್ನ ಸಲುಗೆ ಅವರಿಗೆಸೇರವ ಭಯವು
ಹುಟ್ಟಿ ತವರೆಳೆದೆ, ಬೆಳೆದು ಬಳ್ಳಿ ಎಳೆದೆ
ಬದುಕು ಬಡಿವಾರ, ಗಾಲಿ ಜೋಕಾಲಿ
ನಿಲ್ಲದೆ ನಿಟ್ಟುಸಿರಾಕಿ ಎಳೆದೆ ಬೀಳದೆ
ಸಲ್ಲದೆ ಬರು ಬಿರು ಬಾಣಕೆ ಕಿವುಡಾಗಿ
ದಾರಿ ಯಾವುದು ತಿರುವುಗಳದೆ ಚಿಂತೆ
ಅಪ್ಪಮ್ಮ ಕಲಿಸಿದ ಪತಿಪರದೈವವಂತೆ
ಬಾಗಿ ಬೆಂಡಾದರೂ ಬಿಡದ ಮಾಯೆ
ಬಿಡದೆ ನೆನಪಿಸುವವು ಕನಸಿನ ಛಾಯೆ
ಬಸನಗೌಡ ಗೌಡರ
No comments:
Post a Comment