Thursday, May 28, 2020

ಸಾರ್ಥಕತೆ






ಕಣ್ಣಲ್ಲಿ ಹುಟ್ಟುವ ಪ್ರೇಮನಿವೇದನೆ
ಕಾಡಾದರೇನು ನಾಡಾದರೇನು ?
ಹೃದಯ ತಟ್ಟಿ ಅರಳಿತು ತನು ಮನ
ಕಾಳಿದಾಸನ ಲೇಖನಿಗದು ಪ್ರೇರಣ//

ಅರಸನ ಸರಸ ಬಯಸಬಹುದೆ ?
ಶಾಕುಂತಲೆಗೆ ಸಾಗಿ ಬಂತು ಬಾಗ್ಯ
ಅಪ್ಸರೆಯ ಮೀರೀಸುವ ತಪಸ್ವಿ ಕನ್ಯೆ
ಕಣ್ಣು ಮಾತನಾಡಿ ಕನಸು ಕಟ್ಟಿದವು.//

ಬಳ್ಳಿ ಬೆಸುಗೆಗೆ ಬೆಳದಿಂಗಳು ಸೂಸಿ
ಬೀಜಾಂಕುರಕೆ ಉಂಗುರವೆ ಸಾಕ್ಷಿ
ದೊರೆ ಮರೆತನು ಜಿಂಕೆ ಶಾಪವಾಗಿ
ಮುರಿಯಿತು ಹೃದಯ ವಿರಹವಾಗಿ //

ಪ್ರೀತಿಗೆ ಬಂತು ಸೇತುವೆ ಮತ್ಸ್ಯವಾಗಿ
ಸಾವು ಸಾರ್ಥಕ ತಾ ಉಂಗುರ ನುಂಗಿ
ಕಾಡು ಮಲ್ಲಿಗೆ ನಾಡು ಸೇರಿ ಹಾಡಿತು
ನಾಡ ಬೃಂದಾವನದಿ ಜಿಂಕೆ ಚೆಲ್ಲಾಡಿತು//

           ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...