Wednesday, May 6, 2020

* ರೈತಯೋಗಿ *

ನಾಡೆಲ್ಲ ನೋಡುವುದು ನಿನ್ನ ಕಡೆ
ಯೋಗಿ .....
ಗೌರವದ ಪಾಲಿನಲಿ ನಿನ್ನ ಸಾಲೆ ಕಡೆ 
ತ್ಯಾಗಿ.....
ಬಿಸಿಲು ಚಳಿಯೆ ಬೆಚ್ಚಿತು 
ಉಕ್ಕಿನ ದೇಹ ನೊಡಿ
ಬಗ್ಗದ ದೇಹವದು ಹುರಿ ಕೂಡಿ //

ಬವಣೆ ನೂರು ಸೊರುತಿಹದು ಸೂರು
ಹರಿದಂಗಿಯಲುಕ್ಕಿದೆ ವಿಶ್ವಾಸದ ಬೆವರು
ಸರ್ವ ಸವಾಲು ಒಡಲೊಳಗದು 
ಭೋಗಿ....
ಸೂರ್ಯನೆ ಸೋತ ನಿನ್ನ ಸಹನಗೆ 
ತಲೆಬಾಗಿ  //

ವರುಣನ ಕರುಣೆ  ಎಣಿಸದೆ ದಣಿದೆ
ಧರಣಿಯ ಪ್ರೀತಿಗೆ ದೇಹವ ಮಣಿಸಿದೆ
ಕಷ್ಟಗಳಿರುತ ಕುಗ್ಗದೆ ನುಗ್ಗುವೆ ಮುಂದೆ..
ಸುಲಿದರೂ ವ್ಯಾಪಾರಿ ಬಕ ಪಕ್ಷಿ ಹಿಂದೆ.  //

ಬೆಲೆ ಕಟ್ಟಲಾಗದು ಜಗ ನಿನ್ನ ಮಹಿಮೆ
ಕುಲವಿಲ್ಲ ಶ್ರಮವೊಂದೆ ನೆಲನಿನ್ನಾಶ್ರಮ
ಹೊಲದಲೂಳುವುದೆ ಪೂಜಾಕ್ರಮ
ಬೆವರೆ ಜಲ, ಬಿಸಿ ಉಸಿರೆ ನಿನ್ನ ಹೋಮ//

ಕಡೆಗಾಳು ತಿಂದು ಹಿಡಿಗಾಳು ನೀಡಿ
ಕೊಡಗೈ ನೀನಾದೆ ಪಶು ಪಕ್ಷಿ ಕಾಪಾಡಿ
ಹುಸಿಯನಾಡುತ ಹೊಸೆದರು ಜಾಲ
ಬೆಸಗೊಳ್ಳದೆ ದೀನನಾಗಲಿಲ್ಲ ನೀ ಬಾಗಿ...//
 
ನನ್ನ ನಮನ ಯೋಗಿ, ನನ್ನ ನಮನ ಯೋಗಿ,
ನನ್ನ ನಮನ ಯೋಗಿ. //

             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...