Tuesday, May 12, 2020

* ಬರಹಗಾರ *

ಸಜ್ಜನರ ಸಂತೆ ಅನುಭವದ ಕಂತೆ
ನಿತ್ಯ ನೂಲುವರು ತಮಗಿಷ್ಟ ಬಂದಂತೆ
ಕೂಲಿ ಪಡೆಯದ ಖಾಲಿ ಆಳುಗಳಂತೆ
ನಿತ್ಯವೂ ಇವರಿಗೆ ಸಮಾಜದ ಚಿಂತೆ

ಮಾತಿನ ಮನೆ ಮಹಲು ಕಟ್ಟುವರು
ಸೂರ್ಯ ಚಂದ್ರರನ್ನೆ ಕುಣಿಸಿದವರು
ಇವರಲ್ಲೊ ಸಾವಿರಾರು ಸಾಹಸದ ಜನ
ಸಾಹಿತ್ಯ ಕೃಷಿಯಲ್ಲಿ ನಿತ್ಯ ದುಡಿವ ಜನ

ಭಾಷೆಗಳ ಬಂಧನವಿಲ್ಲ ಬರಹವೆ ಎಲ್ಲ
ಭಾವಜೀವಿಗಳು ಬಹುಕೃತವೇಷಿಗಳಲ್ಲ
ಬರಹದ ಹಿತೈಶಿಗಳೆ ಇವರ ಆಸ್ತಿಗಳೆಲ್ಲ
ಪೆನ್ನು ಹಾಳಿಗಳೆ ಗನ್ನುಗಳೆಂದ ಜನ

ಇವರ ಹೊಲದಲ್ಲಿ  ಗದ್ಯ ಪದ್ಯಗಳು
ಹುಲುಸಾಗಿ ಬೆಳೆ ಬೆಳೆಯುವವರು
ಕೊಯಿಲಿಗೆ ಕೊರತೆಯಿದೆ ಆಳುಗಳ
ಫಸಲು ಬಳಕೆಯನು ನಂಬಿದ ಜನ

ಸಮ್ಮೇಳನಗಳೆ ಇವರ ಹಬ್ಬ ಹರಿದಿನ
ಉಂಡುಟ್ಟು ಮೆರೆಯುವರು ಆ ದಿನ
ವಾದ ವಿವಾದ ಚರ್ಚೆಗಳು ಅನುದಿನ
ನಿರ್ಣಯ ಸಾಧನೆಯ ನಿರ್ಲಿಪ್ತ ಮೌನ

              ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...