Thursday, May 14, 2020

"ಬಾಳ ಪಯಣ *

ಬಾಳೊಂದು ಭಾವ ಮಂದಿರ
ಪ್ರೀತಿಯೆ ಭುವನದ ಹಂದರ
ಪ್ರತಿಕ್ಷಣ ಅರಳಿಸು ನಿರಂತರ // ಪ//

ಸಾಗರ ಡೋಣಿಗೆ ಸಹಜ ತೆರೆ
ಉಬ್ಬರ ವಿಳಿತ ಮೀರಿ ನೀ ನಡೆ
ಬದುಕದು ಸುಂದರ ಸಾಕಾರ ಪಡೆ //

ಬದುಕೊಂದು ಬಂಡಿಯ ಪಯಣ
ಕಲ್ಲು ಮುಳ್ಳುಗಳೆ ಅಡೆ ತಡೆ ಕಣೋ
ಸಾಧಿಸಿ ಸವೆಸಿ ದಾರಿನಡೆ ಜಾಣ

ಭುವಿಯೊಂದೆ ಜೀವರಾಶಿಗಳ ತಾಣ
ಭೂಕಂಪನ ಜ್ವಾಲಾಮುಖಿ ಸಹಜ
ಸಹಜೀವನ ಕಲಿ ನೀ ಮನುಜ//

ನಾನೊಂದು ಬರಿ ಕಾಗದ ಹಾಳೆ
ಗೀಚದಿರು ಅಲ್ಲಿ ರಾಕ್ಷಸ ಬಾಳು
ಬರೆ ಅಲ್ಲಿ ಸುಂದರ ಕಾವ್ಯ ಕಹಳೆ//

        ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...