Thursday, May 14, 2020

* ಅರಿವು *

ಮಾತು ತ್ಯಜಿಸಿ ಮೌನ ಸ್ವೀಕರಿಸಿ
ಮನ ಶಾಂತಿ ಕಂಡು ಬೆರಗಾದೆ
ಮೊದಲೆ ತಿಳಿದರೆ ಸುಲಭದ ಹಾದಿ
ನಾನೇಕೆ ಕಳೆದ ಸರಳ ನೆಮ್ಮದಿ /ಪ/

ಸುಂದರ ಬದುಕಿಗೆ ಸಾವಿರ ಹಾದಿ
ಮಂದಿರ, ಮಸೀದಿ, ಚರ್ಚನು ತಿರುಗಿ
ಮನದಲ್ಲಿ  ಅರಿಯದೆ ಮಾತಾಡಿದೆ
ಮಾತೆ ಮಲ್ಲಿಗೆಯಾಗದೆ ಕೊಲ್ಲಿಸಿದೆ

ಮದನಿಕೆ ಬಯಸಿ ಜಗವದು ತಿರುಗಿ
ಮಡದಿ ಮನ ನಾನರಿಯದೆ ಹೋದೆ
ಮಂಕು ಹಿಡಿದ ಮನಕೆ ಮರೆಯಾದೆ
ತಿಳಿದರೆ ನಾನೇಕೆ ಕಳೆದೆ ಸುಖ ನಿದ್ದೆ

ಮನೆಯದು ನೆಮ್ಮದಿ ನೀಡುವ ಸೌಧ
ಮನೆಯಾಕೆ ಮನ ಅರಿಯದೆ ಹೋದೆ
ಗಗನಕ್ಕೇರಿದ ಭಾವ ತೀರದ ಯಾನ
ಎಲ್ಲೆಡೆ ಹುಡುಕಲು ಮಾಡಿದೆ ಪಯಣ

ಸುಂದರ ಬದುಕು ಅಂದರೆ ಸುಲಭ
ಹೊರಗಡೆ ಹುಡುಕಿದರೆ ತಾ ಸಿಗದು
ದಿವ್ಯದೃಷ್ಟಿ ಒಳಗಡೆ ಅವಿತಿರುವುದು
ಬಳಸಿದಂತೆ ಹನುಮ ಬೆಳೆಯುವುದು

                 ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...