Friday, May 15, 2020

* ಶಿಖರವೇರಿದಾಗ *

ಏರು ನೀನೆರು ಛಲಗಾರ ನೀನೇರು,
ನೀನೆರಿದಾಗ ನಿನ್ನಪಾದದಲ್ಲಿ ನಿನ್ನೂರು.
ತುದಿಸೇರು ನಿನ್ನವರ ಮನೆ ಚಿಕ್ಕದಲ್ಲಿ,
ಮರೆಯದಿರು ನೀ ನಿಟ್ಟ ಹೆಜ್ಜೆ ತಳದಲ್ಲಿ./ಪ/

ಏರುವಾಗ ನಾನೊಮ್ಮೆ ಯೋಚಿಸಿದೆ,
ಎತ್ತರ ಹತ್ತುವಾಗ ಹತ್ತು ಕುತ್ತುಗಳೆಂದು.
ಕಲ್ಲುಮುಳ್ಳು ತರಚಿತು ಅಲ್ಲಿಲ್ಲೊಂದು,
ಉಸಿರನ ಗುರಿಯಿತ್ತು  ಶಿಖರದ್ದೊಂದು./1/

ಶಿಖರದ ತುದಿಯಲ್ಲಿ ಶಿವನ ಶಾಂತಿ,
ಮೇಲ ಮಂದ ಮಾರುತದ ಕ್ರಾಂತಿ.
ಮುಟ್ಟಿದ ಮನವು  ಚಡಪಡಿಸಿತಲ್ಲಿ,
ಮನಪುಲಕ,ಹತ್ತಿದ ಗರ್ವ ನೆತ್ತಿಗೇರಿತಲ್ಲಿ./2/

ಮೆಟ್ಟಿದ ನನ್ನಂತರಕ್ಕೆ ಸರಿಸಮಾನರಿಲ್ಲ
ಸಾಲು ಶಿಖರಗಳೆಣಿಸಿ ಹಕ್ಕು ಸಾಧಿಸಲೆ.
ಶಿಲೆ ಕೆತ್ತಿ ಸಾಹಸದ  ಶಾಸನ ಬರೆಸಲೆ.
ಶಿಖರವೆ ನೊಡಿ ಮುಸಿಮುಸಿ ನಕ್ಕಿತಲ್ಲಿ./3/

ನಿನ್ನಂತೆ ಏರೀದರು ಸಾವಿರ ಸಾವಿರ,
ಏರಿದ ಪಿತ್ತ ನೆತ್ತಿಗೇರಿ ಗರಬಡಿದರು.
ಹತ್ತಿದ ರಭಸಕ್ಕೆ ಇಳಿಜಾರೆ ಮರೆತರು,
ನೋಡಲ್ಲಿ ನಿಮ್ಮಂತವರ ಅಸ್ತಿಪಂಜರ./4/

                🖋️   ಬಸನಗೌಡ ಗೌಡರ. 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...