Saturday, May 16, 2020

* ನಿಷ್ಕಲ್ಮಶ ನೆರವು. *

ಮಾತು ಮೌನದಲಿ ಕೃತಿ ಸೇರಿ
ಮನವು ಹಾರಾಡಲೊಂದು ದಾರಿ
ದಿನವೂ ನಮ್ಮ ಬಾಳು ರಹದಾರಿ
ನೆರವಿಲ್ಲದೆ ತಲಪದು ಹೆಗ್ಗುರಿ//

ಅಪ್ಪ ಮಗನಲ್ಲಿ, ತಾಯಿ ಮಗಳಲ್ಲಿ,
ಸಹೋದರ, ಸಹೋದ್ಯೋಗಿಯಲ್ಲಿ
ಜಗತ್ತೆ ನಡಗಿಸಿದ ಸರ್ವಾಧಿಕಾರಿಯಲ್ಲಿ
ನಿನ್ನ ಅನಗ್ರಹವಿಲ್ಲದೆ ನಡೆಯದಲ್ಲಿ. //

ನನ್ನೂರ ಗಲ್ಲಿ, ನಾನೂಂದು ಕಂಡೆ
ನಡೆದ ವಿಸ್ಮಯ ಚಕಿತಗೊಂಡೆ
ಎರಡು ಬಾಳೆ ಮೂರು ದಾನಿಯ
ನರಳುತ್ತ ಸ್ವೀಕರಿಸಿದ ದೀನದ್ವನಿಯ//

ಒಂದು ಮಾತಿತ್ತು ಎಡಗೈದಾನವದು
ನೆರವು ತಾ ಬಲಗೈಗೆ ತಿಳಿಯ ಬಾರದು.
ಮರೆತು ಮಾಡಿದ ನೆರವು, ಸಿಗುವುದು
ಮಳೆಗಾಲದಂತೆ ಮನ ತಣಿಸುವುದು.//

ನನ್ನವಳು ಅನುದಿನ ನೀಡಿದ ಒಲವು
ನಾನು ಹೇಗೆ ಹೇಳುವುದು ಹಲವು
ನನ್ನಂತರಾತ್ಮದ ಗೆಲುವಿಗೆ ಆಗಿಹವು
ರಹದಾರಿಯ ಅಪ್ಪಟ ದೇಶಿ ನೆರವು //

             ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...