ಸಂಶಯದ ಸುಳಿಗಾಳಿ
ಆವರಿಸಿದೆ ಎನ್ನ ಸನಿಹ
ನೇಸರನನ್ನೂ
ಸುತ್ತುವುದೇನೋ ಇನ್ನು ../
ಇಳೆಯ ಸುತ್ತ ಕಂಪನದ ಹುತ್ತ
ಬಾಳೆಲ್ಲ ಕತ್ತಲು,
ಬರಿ ಸುಂಟರ ಗಾಳಿ
ನನ್ನ ಕರ ನಾ ನಂಬೆ
ಉಜ್ಜಿ ಉಜ್ಜಿ ತೊಳೆದರು
ಬಿಡಲೊಲ್ಲದು ಬೂತ /
ಮರೆಯದು ಆನುಮಾನ
ಮಡದಿ ಮಕ್ಕಳು ಕೆಮ್ಮಿದರು
ಮನ ತಲ್ಲಣ
ನೆರೆ ಹೊರೆಯುವರನ್ನು
ನೋಡುವ ಸೌಜನ್ಯ
ಕರಗಿ ಹೊಳೆ ಯಾಗಿ
ಹರಿಯುತಿದೆ, ಕೆಂಡ ಆರುವುದು
ಯಾವಾಗ ? /
ಮಾತು ಮೌನದಲಿ ಲೀನ
ಭಾವನೆಗಳ ರೌದ್ರ ತಾಂಡವ
ಗುಡುಗು ಸಿಡಿಲಿಗೆ ಆಹ್ವಾನ !
ಮಳೆ ಬರಲು ಮೀನ ಮೇಷ
ಹೃದಯ ಬಳ್ಳಿಯ ಬೇರಿಗೆ
ನೀರೆರೆದು ಚಿಗುರಿಸುವ ಬಗೆ ಹೇಗೆ?
ಬರಿ ಬರಡು ದನಗಳೆ
ಕರೆಯುವುದಾದರು ಹೇಗೆ ?
ಹಾಲುಕ್ಕಿಸಿ ಸೇರುವ ಮನೆಯ
ಕಂಬಗಳೆ ಅಲುಗಡುತಿವೆ
ವಾಸದ ಮನೆಗಳು
ಗಾಸಿಗೊಂಡಿವೆ...//
ಹೊಸ ಮನೆಯ ಕಟ್ಟೋಣ
ಕಂಬಗಳೆ ಇಲ್ಲದ,ಛಾವಣಿಯೇ ಇಲ್ಲದ,
ಬಾಗಿಲೆ ಇಲ್ಲದ ಭದ್ರತೆಯ ಮೀರಿದ,
ಮನೆ ಕಟ್ಟೋಣ ಸಂಶಯದ
ಗಾಳಿ ಮೀರೋಣ //
ಬಸನಗೌಡ ಗೌಡರ
ಆವರಿಸಿದೆ ಎನ್ನ ಸನಿಹ
ನೇಸರನನ್ನೂ
ಸುತ್ತುವುದೇನೋ ಇನ್ನು ../
ಇಳೆಯ ಸುತ್ತ ಕಂಪನದ ಹುತ್ತ
ಬಾಳೆಲ್ಲ ಕತ್ತಲು,
ಬರಿ ಸುಂಟರ ಗಾಳಿ
ನನ್ನ ಕರ ನಾ ನಂಬೆ
ಉಜ್ಜಿ ಉಜ್ಜಿ ತೊಳೆದರು
ಬಿಡಲೊಲ್ಲದು ಬೂತ /
ಮರೆಯದು ಆನುಮಾನ
ಮಡದಿ ಮಕ್ಕಳು ಕೆಮ್ಮಿದರು
ಮನ ತಲ್ಲಣ
ನೆರೆ ಹೊರೆಯುವರನ್ನು
ನೋಡುವ ಸೌಜನ್ಯ
ಕರಗಿ ಹೊಳೆ ಯಾಗಿ
ಹರಿಯುತಿದೆ, ಕೆಂಡ ಆರುವುದು
ಯಾವಾಗ ? /
ಮಾತು ಮೌನದಲಿ ಲೀನ
ಭಾವನೆಗಳ ರೌದ್ರ ತಾಂಡವ
ಗುಡುಗು ಸಿಡಿಲಿಗೆ ಆಹ್ವಾನ !
ಮಳೆ ಬರಲು ಮೀನ ಮೇಷ
ಹೃದಯ ಬಳ್ಳಿಯ ಬೇರಿಗೆ
ನೀರೆರೆದು ಚಿಗುರಿಸುವ ಬಗೆ ಹೇಗೆ?
ಬರಿ ಬರಡು ದನಗಳೆ
ಕರೆಯುವುದಾದರು ಹೇಗೆ ?
ಹಾಲುಕ್ಕಿಸಿ ಸೇರುವ ಮನೆಯ
ಕಂಬಗಳೆ ಅಲುಗಡುತಿವೆ
ವಾಸದ ಮನೆಗಳು
ಗಾಸಿಗೊಂಡಿವೆ...//
ಹೊಸ ಮನೆಯ ಕಟ್ಟೋಣ
ಕಂಬಗಳೆ ಇಲ್ಲದ,ಛಾವಣಿಯೇ ಇಲ್ಲದ,
ಬಾಗಿಲೆ ಇಲ್ಲದ ಭದ್ರತೆಯ ಮೀರಿದ,
ಮನೆ ಕಟ್ಟೋಣ ಸಂಶಯದ
ಗಾಳಿ ಮೀರೋಣ //
ಬಸನಗೌಡ ಗೌಡರ
No comments:
Post a Comment