Thursday, June 11, 2020

* ನನ್ನ ಪಾರಿವಾಳ *

ಕೊಲ್ಲಬೇಡ ಕಳ್ಳಿ, ಹೃದಯ ಕದ್ದ ಮಳ್ಳಿ
ಕಲ್ಲಿನಲ್ಲಿ ಕೆತ್ತದ  ಶಿಲ್ಪಿ ಕರದ ಪಾರಿವಾಳ
ಲಲ್ಲೆಗರೆದು ದೂರಸರಿವ ನಿನ್ನ ಚಾಳಿ
ಬಲ್ಲೆಯೇನು ಎನ್ನ ಮನದ ಬಿರುಗಾಳಿ//

ಆಗಸದ ಚತ್ತಿಗೆ ಏಣಿ ಹತ್ತಿ ಹಿಡಿಯಿಲೆ
ಬೊಗಸೆಗಣ್ಣಿನಲ್ಲಿ ಸೊಗಸು ಕಾಣಲು
ಸಾಗರದಾಳ ಮೀನ ಬಲೆ ಹೆಣೆಯಲೆ
ಸಾಕು ದೂರ ಸಂಚಿನಂಚಿನ ಲೀಲೆ //

ನಿನ್ನ ನೋಟದ ಕಲೆಗೆ ಕಡೆಗೀಲು ಹಾರಿ
ಓಲಾಡುತಿವೆ ಗಾಲಿಗಳು ಗತ್ತು ಜಾರಿ
ಓಡುತಿವೆ ಕುದುರೆಗಳು ಎನ್ನ ಕೈ ಮೀರಿ
ಪಡೆಯಲು ಕ್ರಮಿಸುವದು ಹೇಗೆ ದಾರಿ//

ಬಯಕೆಯ ಬೆನ್ನೇರಿ ಬದುಕಿನಲ್ಲಿ ಬಿದ್ದೆ
ಬಯಲಾಯಿತು ಭ್ರಮೆಯ ಕನಸಿನ ನಿದ್ದೆ
ಬಡಬಡಸಿ ನಿನ್ನ ನೆನಪಿನಲ್ಲಿ ನಾನೆದ್ದೆ
ಬಾರದೆ ಹೋದರೇನು? ಭವಿಯನ್ನೆ ಗೆದ್ದೆ //

                      ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...