Wednesday, July 1, 2020

ವಾಸ್ತವ

ನಾವು ಗುರುಗಳು,ಅಲ್ಲ ತರಲೆಗಳು
ಕಲಿಸತೇವ ಜ್ಞಾನದ ಮೂಲ ತತ್ವಗಳು
ಮರೆಯತೇವ ದಿನ ನಿತ್ಯದ ಸತ್ಯಗಳು
ಹೊಗಳತೇವ ಇತಿಹಾಸ ಆದರ್ಶಗಳು

ಜ್ಞಾನವಂತರು ಜಾಣತನ ಮರೆತವರು
ವಾಸ್ತವವರಿಯದೆ ನಡೆಯುತಿರುವವರು
ನಮ್ಮ ನಿಮ್ಮ ನಡುವೆ ಏನಿದೆ ಅಂತರ
ವಿಷಯ ಸಂಗ್ರಹಿಸುತಿರುವೆವು ನಿರಂತರ //

ಮಾಸ್ತರಗ ಬುದ್ಧಿಯಿಲ್ಲ ಅಂದರು
ಸ್ಟೇಷನ್ ಮಾಸ್ಟರಗ ನಿದ್ದೆಯಿಲ್ಲಂದ್ರು
ಎದುರುತ್ತರವಿಲ್ಲದಕ್ಕ ಹಾಗಂದರು
ಸರಿ ಉತ್ತರವಿದ್ದರ ಹಿಂಗ್ಯಾಕಂತಿದ್ದರು//

ಎಲ್ಲ ಕೆಲಸಗಳನ್ನು ನಾವು ಮಾಡತೇವು
ಬಲ್ಲವರಂಗ ಬೈದವರನ್ನು ಸಹಿಸಿತೇವು
ಬರಿ ಆದರ್ಶ ತತ್ವಗಳ ಮಾತಾಡತೇವು
ಜಾಣರ ಮುಂದ ಅವು ಹೇಗೆ ನಡಿತಾವು//

ಮಕ್ಕಳ ತಪ್ಪಾದರು ನಮ್ಮನ್ನ ಬೈತಾರು
ಮನೆಯಲಿ ಅವ್ರ ಬೇಡಿದ್ದ ಕೊಡತಾರು
ಬೇಕಾದ್ದು ಕೊಟ್ಟಿದ್ರ ಹಿಂಗ್ಯಾಕಾಗತಿದ್ರು
ಮಾಡಬ್ಯಾಡಂತಾರು ತಾವ ಮಾಡತಾರು//

           ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...