Friday, June 26, 2020

* ಕನಕಾಂಗಿ *


ನಾನು ನಿನ್ನ ಪ್ರೀತಿಸುವೆ ಕುವರಿ
ಎಲ್ಲರ ಕಣ್ಣು ನಿನ್ನ ಮೇಲೆ ಪೋರಿ 
ನೀ ಪ್ರೀತಿಸಿದ್ಯಾರನ್ನ ಹೇಳೆ ಸುಕಮಾರಿ
ಹೃದಯ ಕದ್ದವನ ಹೇಳೊಂದು ಸಾರಿ//

ಚಂಚಲೆ ಮಂಚವೇರಲು ನೂರು ದಾರಿ
ನೇರ ಬಂದವರಿಗೆ ಬಹುದೂರ ದಾರಿ
ಅಡ್ಡ ದಾರಿ ಬಂದರೆ ಸಿಗುವಳೇನು ಸರಿ
ಅಟ್ಟಾಡಿಸಿ ಹೊಡೆಯುವಳು ಹೆಮ್ಮಾರಿ//

ಕಾಯಿಸಿ ಬಂದರು ಕೈವಲ್ಯ ಪಡೆದಂತೆ
ಕರ್ಮಯೋಗಿ ಹಿಡಿದವಳು ಕನಕಾಂಗಿ
ಬಡತನದಿ ಬಾಗ್ಯನೀಡುವಳು ಏಕಾಂಗಿ
ನೀನಿರವ ಮನೆಯ ನಿದ್ದೆಗೆಡಸತಿ ಕಮಂಗಿ//

ಬೇತಾಳದಂತ ಬೆನ್ನು ಹತ್ತುವರು ಬಹಳ
ತಲುಪಿದವ ತೃಪ್ತಿಯಿದಾನೇನು ಕೇಳು
ಪ್ರೀತಿಸುವ ಪರಿ ನನಗೊಂದೆಷ್ಟ ಹೇಳು
ಅರಿಯದೆ ಬೆನ್ನುಬಿದ್ದು ಆಗ್ಯಾರು ಹಾಳು//

                ಬಸನಗೌಡ ಗೌಡರ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...