Friday, June 26, 2020

* ತಿಮ್ಮನ ಕೈತೋಟ *


ಅಮ್ಮ ನಿನ್ನ ಗೋಳು ಸಾಕು
ಅಪ್ಪನೇ ಏಕೆ ದುಡಿದು  ತರಬೇಕು
ನಾನು ದುಡಿದು ನಾಡಿಗೆ ಕೊಡುವೆ
ನೀ ಮುದ್ದೆ ಮಾಡಿ ಹಾಕು ಸಾಕು //

ನಮ್ಮ ಮನೆಯಲೊಂದು ತೋಟ
ಇರಲು ಚಿಂತೆ ಯಾಕೆ ಬೇಕು
ಶಾಲೆ ಮುಗಿಸಿ ಕಾಲ ಕಳೆಯದೆ
ಕಸ ತೆಗೆದು ನೀರು ಬಿಡ ಬೇಕು //

ಹಗಲು ಹೊತ್ತು ನೆಗಿಲು ಹೊಡೆದು
ಹದವ ಮಾಡಿ ಬೀಜ ಬಿತ್ತುವೆ
ಗೋದಿ, ಬಾರ್ಲಿ, ಭತ್ತ  ಬೆಳೆದು
ಅಪ್ಪನ ಶ್ರಮವ ಕಡಿಮೆ ಮಾಡುವೆ //

ರಾತ್ರಿ ಹೊತ್ತು  ಚಂದ್ರನದೆ ಗತ್ತು
ನಿಲ್ಲದೆ ಓಡುವನು ಯಾವತ್ತೂ
ಅಪ್ಪನ ಜೊತೆ ನೋಡುವೆ ಇವತ್ತು
ಜೊತೆಗೆ ತಿನ್ನುವೆ ಅಮ್ಮನ ಕೈತುತ್ತು /

        ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...