Thursday, June 25, 2020

ಗಡಿ ಗದ್ದಲ

ಗಡಿಗಾಗಿ ಹೊಡೆದಾಟ ಇಂದಿನದಲ್ಲ
ಬರಿ ಮನುಷ್ಯರದೂ ಅಲ್ಲ,
ಪ್ರಾಣಿ ಪಕ್ಷಿಗಳಲ್ಲೂ ಉಂಟು//

ಅಣ್ಣ ತಮ್ಮಂದಿರು ಹೊಲದ ಗಡಿಗಾಗಿ
ಹೊಡೆದಾಟ, ಒಂದೆ ತಾಯಿ ಮಕ್ಕಳಾಗಿ.
ತಂದೆ ಮಕ್ಕಳ ಹೊಡೆದಾಟವು ಉಂಟು//

ನನ್ನ ಮಕ್ಕಳೇ ಹೊಡೆದಾಟ ಹಕ್ಕಿಗಾಗಿ
ವಿಭಾಗಿಸಿದರು ಕೋಣೆ ಗಡಿ ಗುರುತಿಸಿ
ನಾವು ಕಸಗೂಡಿಸಲು ವಿಭಾಗಿಸಿದ್ದುಂಟು//

ಮುಂದವರಿದವರು ನಾಗರಿಕರರಿವರು
ಮುಂದಿನ ತಲೆಮಾರಿಗೆ ಅನ್ಯ ಗ್ರಹಕ್ಕೂ ಗಡಿ
ನೆರೆಮನೆ ಅನ್ನದ ಗಡಿಯ ತಿಳಿಯದ್ದುಂಟು//

ಪಕ್ಕದ ಚೀನಾ ಪಾಕಿಸ್ತಾನ ಪಕೀರರದ್ದೇನು
ಮಹಾಬಿಡಿ ಇರುವಿಕೆ ತೋರಿಸಲಷ್ಟೆ
ಗೊತ್ತಿಲ್ಲ ಸಾವೆಂಬ ಸಂಗಮವುಂಟು//






No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...