Tuesday, June 23, 2020

* ಅಮರ ಜವಾನ *

ಸಮರವೀರರ ಅಮರ ನಾಮ
ಹಿಮದ ಗಿರಿಗಳಲಿ  ಮೊಳಗಲಿ
ಸಿಂದೂ ಕಂದರ ಗುರಿ ತಲುಪಲಿ
ಸಕಲ ತ್ಯಾಗಿ ಜವಾನ ಮೆರೆಯಲಿ//

ದೇಶಪ್ರೇಮವೊಂದೆ ಇವರ ಉಸಿರು
ಹಸಿರು ಪರ್ವತ ಸಾಲೆ ಇವರ ಹೆಸರು
ಕಣವಿಯಿಂದ ಜಿನುಗುವ ಜೀವಜಲ
ನಮ್ಮ ಯೋಧನ ದೀರ ರಕ್ತ ತರ್ಪಣ//

ಅಂದು ನಮ್ಮ ಋಷಿಯ ತಪದ ತಾನ
ಇಂದು ಯೋಧ ರಣಕಹಳೆ ಗಾಯನ
ಕ್ಷಣ ವಿಚಲಿತನಾದೆ ಎದೆಗೆ ವೈರಿ ಬಾಣ
ವೀರಮರಣ ಕಂಡೆ ದೇಶ ಗುಣಗಾನ//

ವೈರಿ ಪಡೆಗೆ ಎದೆಯೊಡ್ಡಿ ಹುಲ್ಲು ಕಡ್ಡಿ
ಹಿಡಿದು ಗೀರಿ ಸಿಂಹಗರ್ಜನೆ ಠೇಂಕರಿಸಿ
ಹರಸಾಹಸ ಮೆರೆದ ಮಹಾಸಾಹಸಿ
ಹಾರಿಸಿದೆಮ್ಮ ಹೆಮ್ಮೆ ದೇಶ ಬಾವುಟ//

ಹಿಂದೂಸಾಗರದಿಂದ ಸಿಂದೂಕಣೆವೆ
ಮರಳು ಕಣವಿಯಿಂದ ವಂಗಮುಖಜ
ಉಪಖಂಡ ವಂದಿಸಿತು ಇತಿಹಾಸದ
ಸಾವಿರ ಅರಸರ ಶಾಸನ ಸಾಲಿನಲ್ಲಿ //

       🖋️   ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...