Tuesday, June 23, 2020

*ಒಂದಾಗು ಮಲ್ಲಿ *


ಶರವೇಗದಲ್ಲಿ ನಿನ್ನಂದ ಸೆಳೆದಾಗ
ಶುರುವಾಯಿತು ಮೌನಾಲಾಪ ರಾಗ
ಭಾವ ತೀರದಲಿ ಓಲಾಡುತಿದೆ ಕಲ್ಪನೆ
ಭಯ ಮೀರಿ ಪ್ರೀತಿ ಶುರುವಾಗಿದೆ//

ಕನಸಿನ ಕಲ್ಪನೆ ಕಾದು ನೀರಾಗಿ
ನಿನ್ನ ಕಡಲ ತೀರ ಸೇರುವೆ ಸಾಗಿ
ಕವನ ಗೀಚಲು ಪದಗಳಿಗೆ ತಡಕಾಡಿ
ತಲೆ ಸಿಡಿದು ಚೂರಾಗಿ ಸೇರುವೆ ಬಾಗಿ//

ಸಿಂಗಾರದ ಸಿರಿ ಬೇಲೂರು ಬಾಲಕಿ
ಜಕ್ಕಣ್ಣನ ಕೈಚಳಕ ಶಿಲ್ಪಕಲೆ ಮೋಡಿ
ತೆಕ್ಕೆಯಲಿ ಬರಸೆಳೆದು ಬಿಗಿದಪ್ಪುವೆ
ನೀನಿಕ್ಕುವ ಶರತ್ತು ನಾನೊಪ್ಪೀರುವೆ//

ಬರದೆ ಕಾದು ಕೆಳಗಿಳಿಸಿ ಬಿತ್ತಬೇಡ
ಜಾಲಿಮರ ಮುಳ್ಳಗಗಳ ಮೂಟೆ ಅಲ್ಲಿ
ಜಾಜಿಮಲ್ಲಿಗೆ ಕನಕಾಂಬರ ಬೆಳೆವೆನಲ್ಲಿ
ಸೇರಿ ಸುವಾಸನೆ ಸವಿಯಬೇಕು ಮಲ್ಲಿ//

ಸಾಗರ ಮುತ್ತಿಗೆನಿನ್ನ ನತ್ತಿನಲ್ಲಿರುವಾಸೆ
ಕತ್ತಲೆ ಕರೆಯುವುದು ಶಶಿಧರನ ಉಷೆ
ಕಾಣಬಲ್ಲೆಯಾ ಕವಿ ಹೃದಯ ಮೂಸೆ
ಕನಸು ನನಸು ಮಾಡೆನ್ನ ಒತ್ತಾಸೆ//

           ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...