Sunday, June 21, 2020

*ಮರೆಯದ ಅಪ್ಪ *

ಅಪ್ಪ ಆಲದ ಮರ ತಾಯಿ ಗುಬ್ಬವ್ವ
ಅಪ್ಪನ ರಕ್ಷಣೆ ಅರಿವು ಬರದೆ ಹೋತು
ತಾಯಿ ಗುಬ್ಬಿ ಗೂಡು ಹೆಣೆದದ್ದು ಕಾಣಿಸಿತು
ಅಪ್ಪ ಗಾಳಿಮಳೆಗೆ ಬೆಂದದ್ದು ಮರೆತೆ ಬಿಟ್ಟಿ//

ತಾಯಿ ಹಸಿದಾಗ ಬಾಯಿಲೆ ತುತ್ತು ಇಟ್ಲು
ಚಳಿಗಾಲದಾಗ ರೆಕ್ಯಾಗ ಮುಚ್ಚಿಟ್ಲು
ಮಳೆಗೆ ತಲೆ ತೋಯದಂತೆ ಪಕ್ಕಾಬಿಟ್ಲು
ಅಪ್ಪ ಎಲ್ಲಾ ಮುಚ್ಚಿದ್ದು ಮರತೇ ಬಿಟ್ಟೆ//

ಅವ್ವ ನನ್ನ ಹೆತ್ತು ಹೊತ್ತ ಬಾರತಿಂದಳು
ರೋಗ ಬಂದರ ಕಣ್ಣೀರು ಹಾಕಿದಳು
ಕೆಳಗಿಳದರ ಚೀರಾಡಿ ಮೇಲೆಳದಳು
ಅಪ್ಪ ಎಲ್ಲರನ್ನ ಎತ್ತಿದ್ದು ಮರತೆ ಬಿಟ್ವಿ//

ಅವ್ವ ಹಾರಾಡಿ ಆಹಾರ ತಂದಳು
ಹೋರಾಡಿ ಬಾಯಿಗೆ ಹಾಕಿದಳು
ಅಪ್ಪ ಆಳಕ್ಕಿಳಿದ ಬಾನಿಗೆ ಬೆಳೆಸಿದ
ಮಧ್ಯ ನಿಂತ ಅಪ್ಪನ್ನ ಮರತೆಬಿಟ್ವಿ//

                 ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...