Friday, June 19, 2020

* ಕಾಲಹರಣ *


ನಿಸರ್ಗ ನಾನರಿಯದೆ 
ಸ್ವರ್ಗ ಬಯಸಿ ಹೋದೆ
ಬೆತ್ತಲಾಗಿ ಕತ್ತಲೆಯಲ್ಲಿಳಿದೆ
ಸುತ್ತಲೂ ಬರಿ ಬಯಲೆ /
ಸಂಬಂಧಗಳು  ಮುಕ್ಕಿ ಹುರಿದು
ನೆಕ್ಕಿ ನೋಡಿ ಪಕ್ಕಕ್ಕಿಟ್ಟು
ತಕ್ಕಡಿಯ ಪರಡಿಗಿಟ್ಟರು ಹಾಡಿ / 
ತೂಗಿನೋಡಿದರು ಜಾಲಾಡಿ
ಬುದ್ಧಿ ಬರಲಿಲ್ಲ ....?
ಬಂದವರೆಲ್ಲ ನನ್ನವರೆಂದು
ನಿದ್ರೆಯಿಲ್ಲದೆ  ಸದ್ದು ಮಾಡಿ ಓಡಾಡಿದೆ  /
ಸದ್ದಿಲ್ಲದೆ  ಬಂದ ಹದ್ದುಗಳು 
ಅನುಕಿಸಿದವು ನನ್ನ ನೋಡಿ ..
ಕಾಲಮಿಂಚಿತ್ತು ಅರಿವೆಂಬ
ಕೋಲ್ಮಿಂಚು  ಸೆಳೆದಾಗ
ಬರಿ ಬೋಧನೆಯೊಂದೆ ಉಳಿದಿದ್ದು!
ಕೈಲಾಗದ ಹೇಡಿಯಾದೆ,,,
ತಿಳಿದವರು ಕೇಳಲಾರರು.!
ಕೇಳುವವರಿಗೆ ಅರ್ಥವಾಗದು.
ಕರ್ಮ ಶಪಿಸಿ ಧರ್ಮ ಹಿಡಿದೆ
ಇಲ್ಲೂ ನೂರಾರು  .....
ಹಿಡಿಯುವುದಾದರು ಯಾವುದನ್ನು ?
ತೆಲೆ ತಿರುಗಿ ಕಾಲವನ್ನು ಕೊಂದೆ
ಕರಿನೀರ ಶಿಕ್ಷೆಯೊಂದೆ ಬಾಕಿ /
            
         ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...